"ಆದ್ದರಿಂದ ಈ ಭಕ್ತಿ, ಕೃಷ್ಣನ ಭಕ್ತಿ ಸೇವೆ ತುಂಬಾ ಚೆನ್ನಾಗಿದೆ. ಮತ್ತು ಆ ಭಕ್ತಿ ವರ್ಗದಲ್ಲಿ, ಈ ಜನ್ಮಾಷ್ಟಮಿ... ಹೌದು, ಈ ಜನ್ಮಾಷ್ಟಮಿ ಸಮಾರಂಭವು ಎಲ್ಲಾ ಹಿಂದೂಗಳಿಂದಲೂ ಆಚರಿಸಲ್ಪಡಲಾಗುತ್ತದೆ. ವೈಷ್ಣವ ಇರಬಹುದು ಅಥವಾ ಇಲ್ಲದಿರಬಹುದು ಅದು ಅಪ್ರಸಕ್ತ, ಈ ಸಮಾರಂಭವನ್ನು ಭಾರತದ ಪ್ರತಿ ಮನೆಯಲ್ಲಿಆಚರಿಸಲಾಗುತ್ತದೆ. ನಿಮ್ಮ ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರತಿ ಮನೆಯಲ್ಲೂ ಕ್ರಿಸ್‌ಮಸ್ ಆಚರಿಸುವಂತೆ, ಅದೇ ರೀತಿ, ಜನ್ಮಾಷ್ಟಮಿಯನ್ನು ಪ್ರತಿ ಮನೆಯಲ್ಲೂ ಆಚರಿಸಲಾಗುತ್ತದೆ. ಇಂದು ಒಂದು ದೊಡ್ಡ ವಿಧ್ಯುಕ್ತ ದಿನವಾಗಿದೆ. ಆದ್ದರಿಂದ ನಮ್ಮ ಕಾರ್ಯಕ್ರಮವೆಂದರೆ, ರಾತ್ರಿ ಹನ್ನೆರಡು ಗಂಟೆಗೆ ಭಗವಂತ ಅವತರಿಸುತ್ತಾನೆ ಮತ್ತು ನಾವು ಆತನನ್ನು ಬರಗೊಳ್ಳುತ್ತೇವೆ.
|