"ಮೊದಲನೆಯದಾಗಿ, ಕೃಷ್ಣನ ಭಕ್ತನಾಗಲು ಪ್ರಯತ್ನಿಸಿ. ನಂತರ ಭಗವದ್ಗೀತೆ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ-ನಿಮ್ಮ ಪಾಂಡಿತ್ಯ ಅಥವಾ ನಿಮ್ಮ ಊಹಾಪೋಹಗಳಿಂದ ಅಲ್ಲ. ಆನಂತರ ನೀವು ಎಂದಿಗೂ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ನೀವು ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಬೇಕು ಎನ್ನುವುದಾದರೆ, ಆಗ ನೀವು ಭಗವದ್ಗೀತೆಯಲ್ಲಿ ಹೇಳಿರುವ ಪ್ರಕ್ರಿಯೆಯಿಂದಲೇ ಅರ್ಥಮಾಡಿಕೊಳ್ಳಬೇಕು, ನಿಮ್ಮ ಸ್ವಂತ ಮಾನಸಿಕ ಊಹಾಪೋಹಗಳಿಂದಲ್ಲ. ಇದು ಅರ್ಥಮಾಡಿಕೊಳ್ಳುವ ಪ್ರಕ್ರಿಯೆ. ಭಕ್ತೋ 'ಸಿ ಮೆ ಸಖಾ ಚೇತಿ (ಭ. ಗೀತಾ ೪.೩). ಭಕ್ತ ಎಂದರೆ... ಯಾರು ಭಕ್ತ? ಭಕ್ತ ಎಂದರೆ ದೇವರೊಂದಿಗಿನ ತನ್ನ ಶಾಶ್ವತ ಸಂಬಂಧವನ್ನು ಪುನರುಜ್ಜೀವನಗೊಳಿಸಿದವನು."
|