"ಆದ್ದರಿಂದ ಚೈತನ್ಯ ಮಹಾಪ್ರಭು ಈ ಎಲ್ಲ ಸೌಲಭ್ಯಗಳನ್ನು ಹೊಂದಿದ್ದರು. ಅವರು ಜ್ಞಾನಿಗಳಾಗಿದ್ದರು, ಅವರ ದೇಶದಲ್ಲಿ ಬಹಳ ಗೌರವಾನ್ವಿತ ಯುವಕರಾಗಿದ್ದರು; ಅವರಿಗೆ ಅನೇಕ ಅನುಯಾಯಿಗಳು ಇದ್ದರು. ಒಂದು ಘಟನೆಯಲ್ಲಿ ಅವರು ಎಷ್ಟು ಪ್ರೀತಿಯ ನಾಯಕರೆಂದು ನಾವು ಅರ್ಥಮಾಡಿಕೊಳ್ಳಬಹುದು. ಕಾಜಿ ಅವರ ಸಂಕೀರ್ತನ ಆಂದೋಲನವನ್ನು ಪ್ರಶ್ನಿಸಿ ಸವಾಲು ಹಾಕಿದನು ಮತ್ತು ಮೊದಲಿಗೆ ಹರೇ ಕೃಷ್ಣ ವನ್ನು ಜಪಿಸಬಾರದೆಂದು ಅವರಿಗೆ ಎಚ್ಚರಿಕೆ ನೀಡಿದನು, ಮತ್ತು ಯಾವಾಗ ಅವರು ಅದನ್ನು ಉತ್ಪ್ರೇಕ್ಷಿಸಿದರೋ,ಆಗ ಮೃದಂಗವನ್ನು ಮುರಿಯಬೇಕೆಂದು ಅವನು ಆದೇಶಿಸಿದನು. ಆದ್ದರಿಂದ ಸಿಪಾಯಿಗಳು ಬಂದು ಮೃದಂಗವನ್ನು ಮುರಿದರು. ಈ ವಿಷಯವನ್ನು ಚೈತನ್ಯ ಮಹಾಪ್ರಭುಗಳಿಗೆ ತಲುಪಿಸಲಾಯಿತು, ಮತ್ತು ಅವರು ಕಾಯಿದೆ ಭಂಗ ಅಸಹಕಾರವನ್ನು ಆದೇಶಿಸಿದರು. ಭಾರತದ ಇತಿಹಾಸದಲ್ಲಿ ಈ ಕಾನೂನು ಅಸಹಕಾರ ಚಳವಳಿಯನ್ನು ಪ್ರಾರಂಭಿಸಿದ ಮೊದಲ ವ್ಯಕ್ತಿ ಅವರು."
|