KN/680830 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ರಾಧಾರಾಣಿಯು ಕೃಷ್ಣನ ವಿಸ್ತರಣೆ. ಕೃಷ್ಣನು ಚೈತನ್ಯ, ಮತ್ತು ರಾಧಾರಾಣಿಯು ಚೈತನ್ಯಶಾಲಿ. ಚೈತನ್ಯ ಮತ್ತು ಚೈತನ್ಯಶಾಲಿಯಂತೆ, ನೀವು ಬೇರ್ಪಡಿಸಲು ಸಾಧ್ಯವಿಲ್ಲ. ಬೆಂಕಿ ಮತ್ತು ಶಾಖವನ್ನು ನೀವು ಬೇರ್ಪಡಿಸಲು ಸಾಧ್ಯವಿಲ್ಲ. ಬೆಂಕಿ ಇರುವಲ್ಲೆಲ್ಲಾ ಶಾಖವಿದೆ, ಮತ್ತು ಎಲ್ಲೆಲ್ಲಿ ಶಾಖವಿದೆಯೋ ಅಲ್ಲಿ ಬೆಂಕಿ. ಅದೇ ರೀತಿ, ಕೃಷ್ಣ ಇರುವಕಡೆಯೆಲ್ಲ ರಾಧಾ ಇರುವರು. ಮತ್ತು ರಾಧಾ ಇರುವಕಡೆಯೆಲ್ಲ ಕೃಷ್ಣ ಇರುವನು. ಅವರನ್ನು ಬೇರ್ಪಡಿಸಲಾಗದು. ಆದರೆ ಅವನು ಆನಂದಿಸುತ್ತಿದ್ದಾನೆ. ಆದ್ದರಿಂದ ಸ್ವರೂಪ ದಾಮೋದರ ಗೋಸ್ವಾಮಿ ಅವರು ರಾಧಾ ಮತ್ತು ಕೃಷ್ಣ ಅವರ ಈ ಸಂಕೀರ್ಣವಾದ ತತ್ವಶಾಸ್ತ್ರವನ್ನು ಒಂದು ಪದ್ಯದಲ್ಲಿ ವಿವರಿಸಿದ್ದಾರೆ, ಬಹಳ ಸುಂದರವಾಗಿದೆ ಪದ್ಯ. ರಾಧಾ ಕೃಷ್ಣ-ಪ್ರಣಯ-ವಿಕೃತಿರ್ ಹ್ಲಾದಿನೀ-ಶಕ್ತಿರ್ ಅಸ್ಮಾದ್ ಎಕಾತ್ಮಾನಾವ್ ಅಪಿ ಭುವಿ ಪುರಾ ದೇಹ-ಭೇದಂ ಗತೌ ತೌ (ಚೈ ಚ ಆದಿ ೧.೫). ಆದ್ದರಿಂದ ರಾಧಾ ಮತ್ತು ಕೃಷ್ಣ ಸೇರಿ ಒಂದು ಸರ್ವೋಚ್ಛ, ಆದರೆ ಆನಂದಿಸಲು, ಅವರು ಎರಡು ಭಾಗಗಳಾಗಿ ವಿಭಜಿಸಿದ್ದಾರೆ. ಮತ್ತೆ ಚೈತನ್ಯ ಮಹಾಪ್ರಭುಗಳು ಎರಡು ಭಾಗಗಳು ಸೇರಿ ಒಬ್ಬರಾಗಿದ್ದಾರೆ. ಚೈತನ್ಯಾಖ್ಯಮ್ ಪ್ರಕಟಮ್ ಅಧುನಾ. ಇದರ ಅರ್ಥ ರಾಧಾಳ ಭಾವಪರವಶತೆಯಲ್ಲಿ ಕೃಷ್ಣ. ಕೆಲವೊಮ್ಮೆ ಕೃಷ್ಣ ರಾಧಾಳ ಭಾವಪರವಶತೆಯಲ್ಲಿ. ಕೆಲವೊಮ್ಮೆ ರಾಧಾ ಕೃಷ್ಣನ ಭಾವಪರವಶತೆಯಲ್ಲಿ. ಇದು ನಡೆಯುತ್ತಿದೆ. ಆದರೆ ಒಟ್ಟಿನಲ್ಲಿ ವಿಷಯವೆಂದರೆ ರಾಧಾ ಮತ್ತು ಕೃಷ್ಣ ಎಂದರೆ ಒಂದು, ಸರ್ವೋಚ್ಚ."
680830 - ಉಪನ್ಯಾಸ ಹಬ್ಬ ಆವಿರ್ಭಾವ, ಶ್ರೀಮತಿ ರಾಧಾರಾಣಿ, ರಾಧಾಷ್ಟಮಿ - ಮಾಂಟ್ರಿಯಲ್