"ಈ ಭಗವದ್ಗೀತೆಯನ್ನು ಮಾನವ ಸಮಾಜವು ಭಾರತದಲ್ಲಿ ಮಾತ್ರವಲ್ಲ, ಭಾರತದ ಹೊರಗೆ, ಬಹಳ ಹಿಂದಿನಿಂದಲೂ ಪಠಣ ಮಾಡುತ್ತಿದೆ. ಆದರೆ ದುರದೃಷ್ಟವಶಾತ್, ಭೌತಿಕವಸ್ತು ಮಾಲಿನ್ಯದ ಸಂಪರ್ಕದಿಂದ ಎಲ್ಲವೂ ಹದಗೆಟ್ಟಿರುವುದರಿಂದ ಜನರು ಭಗವದ್ಗೀತೆಯನ್ನು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಲು ಪ್ರಾರಂಭಿಸಿದರು. ಆದ್ದರಿಂದ ಸುಮಾರು ಐನೂರು ವರ್ಷಗಳ ಹಿಂದೆ, ಭಗವಾನ್ ಚೈತನ್ಯ ಮಹಾಪ್ರಭುಗಳು ಕಾಣಿಸಿಕೊಂಡರು, ಮತ್ತು ಅವರು ಬಂಗಾಳದಲ್ಲಿ ಕೃಷ್ಣ ಪ್ರಜ್ಞೆ ಆಂದೋಲನವನ್ನುಅವರ ವೈಯಕ್ತಿಕ ಮಾರ್ಗದರ್ಶನದಲ್ಲಿ ಪ್ರಾರಂಭಿಸಿದರು. ಅವರ ಜನ್ಮಸ್ಥಳವನ್ನು ನವದ್ವೀಪ ಎಂದು ಕರೆಯಲಾಗುತ್ತದೆ. ಈಗ, ಅವರು ಕೃಷ್ಣ ಪ್ರಜ್ಞೆಯ ಈ ಸಂದೇಶವನ್ನು ಹರಡಲು ಪ್ರತಿಯೊಬ್ಬ ಭಾರತೀಯರಿಗೂ ಆದೇಶಿಸಿದರು ಪ್ರಪಂಚದಾದ್ಯಂತ, ಪ್ರತಿ ಹಳ್ಳಿಯಲ್ಲಿ, ಪ್ರತಿ ಪಟ್ಟಣದಲ್ಲಿ. ಅದು ಅವರ ಆದೇಶವಾಗಿತ್ತು. "
|