"ಎಲ್ಲಿಯವರೆಗೂ ನೀವು ನಿಮ್ಮ ಇಂದ್ರಿಯಗಳ ತೃಪ್ತಿಯನ್ನು ಪೂರೈಸಲು ಪ್ರಯತ್ನಿಸುತ್ತೀರೋ, ಅದು ನಿಮ್ಮ ಭೌತಿಕ ಜೀವನ. ಕೃಷ್ಣನ ಇಂದ್ರಿಯಗಳನ್ನು ಪೂರೈಸಲು ನಿಮ್ಮನ್ನು ನೀವು ತೊಡಗಿಸಿಕೊಂಡ ಕೂಡಲೇ ಅದು ನಿಮ್ಮ ಆಧ್ಯಾತ್ಮಿಕ ಜೀವನ. ಇದು ತುಂಬಾ ಸರಳವಾದ ವಿಷಯ. ತೃಪ್ತಿಪಡಿಸುವ ಬದಲು ... ಹೃಷಿಕೇನ ಹೃಷಿಕೇಶ-ಸೇವನಂ (ಚೈ.ಚ.ಮದ್ಯ ೧೯.೧೭೦). ಅದು ಭಕ್ತಿ. ನಿಮಗೆ ಇಂದ್ರಿಯಗಳಿವೆ. ನೀವು ತೃಪ್ತಿಪಡಿಸಬೇಕು. ಇಂದ್ರಿಯಗಳು, ಇಂದ್ರಿಯಗಳೊಂದಿಗೆ ನೀವು ತೃಪ್ತಿಪಡಿಸಬೇಕು.ಒಂದೋ ನೀವು ನಿಮ್ಮನ್ನೇ ತೃಪ್ತಿಪಡಿಸುಕೊಳ್ಳಬೇಕು... ಆದರೆ ನಿಮಗೆ ಗೊತ್ತಿಲ್ಲ. ಕೃಷ್ಣನ ಇಂದ್ರಿಯಗಳನ್ನು ತೃಪ್ತಿಪಡಿಸುವುದರಿಂದ, ತನ್ನ ಇಂದ್ರಿಯಗಳು ಸ್ವಯಂಚಾಲಿತವಾಗಿ ತೃಪ್ತಿಗೊಳ್ಳುತ್ತವೆ ಎಂದು ನಿಯಮಾಧೀನದ ಆತ್ಮಕ್ಕೆ ತಿಳಿದಿಲ್ಲ. ಅದೇ ಉದಾಹರಣೆ: ಬೇರಿಗೆ ನೀರನ್ನು ಸುರಿಯುವಂತೆಯೇ ... ಅಥವಾ ಈ ಬೆರಳುಗಳು, ನನ್ನ ದೇಹದ ಒಂದು ಅವಿಭಾಜ್ಯ ಅಂಗ, ಇಲ್ಲಿ ಉದರಕ್ಕೆ ಆಹಾರ ಪದಾರ್ಥಗಳನ್ನು ನೀಡಿದರೆ, ಸ್ವಯಂಚಾಲಿತವಾಗಿ ಬೆರಳುಗಳು ತೃಪ್ತಿಗೊಳ್ಳುತ್ತವೆ. ಈ ರಹಸ್ಯವನ್ನು ನಾವು ಕಳೆದುಕೊಂಡಿದ್ದೇವೆ. ನಮ್ಮ ಇಂದ್ರಿಯಗಳ ತೃಪ್ತಿಯನ್ನು ಪೂರೈಸಲು ಪ್ರಯತ್ನಿಸುವ ಮೂಲಕ ನಾವು ಸಂತೋಷವಾಗಿರುತ್ತೇವೆ ಎಂದು ನಾವು ಭಾವಿಸುತ್ತಿದ್ದೇವೆ. ಕೃಷ್ಣ ಪ್ರಜ್ಞೆ ಎಂದರೆ ನಿಮ್ಮ ಇಂದ್ರಿಯಗಳನ್ನು ಪೂರೈಸಲು ಪ್ರಯತ್ನಿಸಬೇಡಿ, ನೀವು ಕೃಷ್ಣನ ಇಂದ್ರಿಯಗಳನ್ನು ಪೂರೈಸಲು ಪ್ರಯತ್ನಿಸಿ; ಸ್ವಯಂಚಾಲಿತವಾಗಿ ನಿಮ್ಮ ಇಂದ್ರಿಯಗಳು ತೃಪ್ತಿಗೊಳ್ಳುತ್ತವೆ. ಇದು ಕೃಷ್ಣ ಪ್ರಜ್ಞೆಯ ರಹಸ್ಯ."
|