"ನಾವು ಮೂಲ ಪುರುಷ, ದೇವೋತ್ತಮ ಪರಮ ಪುರುಷನಾದ ಗೋವಿಂದನನ್ನು ಪೂಜಿಸುತ್ತಿದ್ದೇವೆ. ಆದ್ದರಿಂದ ಈ ಧ್ವನಿ, ಗೋವಿಂದಂ ಆದಿ-ಪುರುಷಮ್ ತಮಹಂ ಭಜಾಮಿ, ಅವನನ್ನು ತಲುಪುತ್ತಿದೆ. ಅವನು ಕೇಳುತ್ತಿದ್ದಾನೆ. ಅವನು ಕೇಳುತ್ತಿಲ್ಲ ಎಂದು ನೀವು ಹೇಳಲು ಸಾಧ್ಯವಿಲ್ಲ. ನೀವು ಹೇಳಬಹುದೇ? ಇಲ್ಲ? ವಿಶೇಷವಾಗಿ ಈ ವೈಜ್ಞಾನಿಕ ಯುಗದಲ್ಲಿ, ದೂರದರ್ಶನ, ರೇಡಿಯೊ ಸಂದೇಶಗಳು ಸಾವಿರಾರು ಮತ್ತು ಸಾವಿರಾರು ಮೈಲುಗಳಷ್ಟು ದೂರದಲ್ಲಿ ಪ್ರಸಾರವಾದಾಗ ಮತ್ತು ನೀವು ಕೇಳಬಹುದು, ಈಗ ನೀವು ಯಾಕೆ .....? ಕೃಷ್ಣ ನಿಮ್ಮ ಪ್ರಾರ್ಥನೆಯನ್ನು ಏಕೆ ಕೇಳಬಾರದು, ಪ್ರಾಮಾಣಿಕ ಪ್ರಾರ್ಥನೆ? ನೀವು ಹೇಗೆ ಅದನ್ನು ಹೇಳಬಹುದು? ಅದನ್ನು ಯಾರೂ ಅಲ್ಲಗಳೆಯುವಂತಿಲ್ಲ."
|