"ಯಾವ ರೀತಿಯಲ್ಲಿ ನೀವು ಸಾವಿರ ಮತ್ತು ಸಾವಿರಾರು ಮೈಲುಗಳಷ್ಟು ದೂರಕ್ಕೆ ಟೆಲಿವಿಷನ್ ಚಿತ್ರ ಅಥವಾ ನಿಮ್ಮ ರೇಡಿಯೊ ಧ್ವನಿಯನ್ನು ವರ್ಗಾಯಿಸಬಹುದೋ, ಅದೇ ರೀತಿ, ನೀವೇ ನಿಮ್ಮನ್ನು ತಯಾರಿ ಮಾಡಿಕೊಳ್ಳಲು ಸಾಧ್ಯವಾದರೆ, ನೀವು ಯಾವಾಗಲೂ ಗೋವಿಂದನನ್ನು ನೋಡಬಹುದು. ಇದು ಕಷ್ಟವೇನಲ್ಲ. ಇದನ್ನು ಬ್ರಹ್ಮ-ಸಂಹಿತದಲ್ಲಿ, ಪ್ರೇಮಾಂಜನ-ಚುರಿತ-ಭಕ್ತಿ-ವಿಲೋಚನೇನ ಎಂದು ಹೇಳಲಾಗಿದೆ. ಸುಮ್ಮನೆ ನೀವು ನಿಮ್ಮ ಕಣ್ಣುಗಳನ್ನು, ನಿಮ್ಮ ಮನಸ್ಸನ್ನು ಆ ರೀತಿಯಲ್ಲಿ ಸಿದ್ಧಪಡಿಸಬೇಕು. ನಿಮ್ಮ ಹೃದಯದೊಳಗೆ ಇಲ್ಲಿ ದೂರ ದರ್ಶನದ ಒಂದು ಪೆಟ್ಟಿಗೆ ಇದೆ. ಇದು ಯೋಗದ ಪರಿಪೂರ್ಣತೆ. ನೀವು ಒಂದು ಯಂತ್ರ ಅಥವಾ ಟೆಲಿವಿಷನ್ ಸೆಟ್ ಅನ್ನು ಖರೀದಿಸಬೇಕಾಗಿಲ್ಲ. ಅದು ಇದೆ, ಮತ್ತು ದೇವರು ಕೂಡ ಇದ್ದಾನೆ. ನಿಮಗೆ ಆ ಯಂತ್ರ ದೊರಕಿದರೆ ನೀವು ನೋಡಬಹುದು, ನೀವು ಕೇಳಬಹುದು, ಮಾತನಾಡಬಹುದು, ನೀವು ಅದನ್ನು ಸರಿಪಡಿಸುತ್ತೀರಿ, ಅಷ್ಟೆ. ದುರಸ್ತಿ ಪ್ರಕ್ರಿಯೆಯು ಕೃಷ್ಣ ಪ್ರಜ್ಞೆ. "
|