KN/681021b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಜಯ-ಗೋಪಾಲ: ಮಾಯದೇವಿ ಯಾವ ವಿಧದ ಜೀವ ಸ್ವರೂಪ ?

ಪ್ರಭುಪಾದ: ಅವಳು ವೈಷ್ಣವಿ. ಅವಳು ಕೃಷ್ಣನ ಮಹಾನ್ ಭಕ್ತೆ. ಆದರೆ ಅವಳು ಅಭಿನ೦ದನೀಯವಲ್ಲದ ಕಾರ್ಯವನ್ನು ಒಪ್ಪಿಕೊಂಡಿದ್ದಾಳೆ: ಶಿಕ್ಷಿಸಲು. ಪೊಲೀಸ್ ಒಬ್ಬ ಪ್ರಾಮಾಣಿಕ ಸರ್ಕಾರಿ ನೌಕರ, ಆದರೆ ಅವನು ಒಂದು ಕೆಲಸವನ್ನು ಒಪ್ಪಿಕೊಂಡಿದ್ದಾನೆ, ಯಾರೂ ಅವನನ್ನು ಇಷ್ಟಪಡುವುದಿಲ್ಲ. (ನಗು) ಕೆಲವು ಪೊಲೀಸರು ಇಲ್ಲಿಗೆ ಬಂದರೆ, ತಕ್ಷಣ ನಿಮಗೆ ತೊಂದರೆಯಾಗುತ್ತದೆ. ಆದರೆ ಅವರು ಸರ್ಕಾರದ ಪ್ರಾಮಾಣಿಕ ಸೇವಕರು. ಅದು ಮಾಯೆಯ ಸ್ಥಾನ. ಇಲ್ಲಿ ಆನಂದಿಸಲು ಬಂದಿರುವ ಈ ರಾಸ್ಕಲ್‌ಗಳನ್ನು ಶಿಕ್ಷಿಸುವುದು ಅವಳ ವ್ಯವಹಾರ. (ನಗು) ನೀವು ನೋಡಿ ? ಆದರೆ ಅವಳು ದೇವರ ಪ್ರಾಮಾಣಿಕ ಸೇವಕಿ.

ಜಯ-ಗೋಪಾಲ: ಇದು ಒಂದು ಸ್ಥಾನದಂತೆಯೇ ?

ಪ್ರಭುಪಾದ: ಹೌದು. ಇದು ಒಂದು ಸ್ಥಾನ, ಕೃತಜ್ಞತೆಯಿಲ್ಲದ ಸ್ಥಾನ. ಯಾರಿಂದಲೂ ಧನ್ಯವಾದಗಳಿಲ್ಲ. ಎಲ್ಲರೂ ಲೇವಡಿ ಮಾಡುತ್ತಾರೆ. ನೋಡಿ? ಆದರೆ ಅವಳು ಮಹಾನ್ ಭಕ್ತೆ. ಅವಳು ಸಹಿಸಿಕೊಳ್ಳುತ್ತಾಳೆ ಮತ್ತು ಶಿಕ್ಷಿಸುತ್ತಾಳೆ. ಅಷ್ಟೇ. ದೈವೀ ಹೈ ಏಷ ಗುಣಮಯೀ ಮಾಮ ಮಾಯಾ ದುರತ್ಯಯಾ(ಭ.ಗೀತಾ ೭.೧೪). 'ನೀವು ಕೃಷ್ಣ ಪ್ರಜ್ಞೆ ಹೊಂದಿದರೆ, ನಾನು ನಿನ್ನನ್ನು ಬಿಟ್ಟು ಬಿಡುತ್ತೇನೆ' ಎಂದು ನೋಡಲು ಅವಳು ಬಯಸುತ್ತಾಳೆ, ಅಷ್ಟೆ. ಪೊಲೀಸ್ ವ್ಯವಹಾರವೆಂದರೆ "ನೀವು ಕಾನೂನು ಪಾಲಿಸುವ ಪ್ರಜೆಯಾಗುತ್ತೀರಿ; ಆಗ ನನಗೆ ನಿಮ್ಮೊಂದಿಗೆ ಯಾವುದೇ ಸಂಬಂಧವಿಲ್ಲ

681021 - ಉಪನ್ಯಾಸ ಶ್ರೀ.ಭಾ. ೦೭.೦೯.೦೮ - ಸಿಯಾಟಲ್