"ಇಲ್ಲಿ ನಾವು ಆತ್ಮ, ಪ್ರಜ್ಞೆ, ಅಭಿವೃದ್ಧಿಯ ವಿವಿಧ ಹಂತಗಳನ್ನು ನೋಡುತ್ತೇವೆ. ಅದು ಜೀವನದ ವಿಭಿನ್ನ ಸ್ಥಿತಿಯನ್ನು ಮಾಡುತ್ತದೆ. ಮತ್ತು ಆ ವಿಭಿನ್ನ ಸ್ಥಿತಿಯ ಜೀವನದಲ್ಲಿ ವೈವಿಧ್ಯಗಳು, ೮,೪೦೦,೦೦೦ ಅಭಿವೃದ್ಧಿ ಹೊಂದುತ್ತಿದೆ. ಅಭಿವೃದ್ಧಿ ಎಂದರೆ ವಿವಿಧ ರೀತಿಯ ದೇಹ. ಈ ಮಗುವಿನಂತೆಯೇ. ಈಗ ಈ ಮಗುವು ಒಂದು ನಿರ್ದಿಷ್ಟ ರೀತಿಯ ದೇಹವನ್ನು ಹೊಂದಿದೆ. ಪ್ರಜ್ಞೆಯು ಆ ದೇಹಕ್ಕೆ ಅನುಗುಣವಾಗಿರುತ್ತದೆ. ಈ ಮಗು, ಅವಳು ಚಿಕ್ಕ ಹುಡುಗಿಯಾಗಿ ಬೆಳೆದಾಗ, ಅವಳ ಪ್ರಜ್ಞೆಯು ವಿಭಿನ್ನವಾಗಿರುತ್ತದೆ-ಅದೇ ಮಗು. ಆದ್ದರಿಂದ ಆತ್ಮವು ಈ ಭೌತಿಕ ದೇಹದಿಂದ ಸುತ್ತುವರಿಯಲ್ಪಟ್ಟಿದೆ, ಮತ್ತು ದೇಹದ ಪ್ರಕಾರ, ಪ್ರಜ್ಞೆ ವಿಭಿನ್ನವಾಗಿದೆ. ಇದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಸರಳವಾಗಿದೆ. ಈ ಮಗುವಿನ ಉದಾಹರಣೆಯನ್ನು ತೆಗೆದುಕೊಳ್ಳಿ. ಅದೇ ಮಗು, ಅದೇ ಚೇತನ ಆತ್ಮ, ಅದು ಈಗ ಬೇರೆ ರೀತಿಯ ದೇಹದಲ್ಲಿ ವಾಸಿಸುತ್ತಿರುವ ಕಾರಣದಿಂದ, ಅದರ ಪ್ರಜ್ಞೆಯು ತಾಯಿಯ ಪ್ರಜ್ಞೆಗಿಂತ ಭಿನ್ನವಾಗಿದೆ , ಏಕೆಂದರೆ ತಾಯಿಗೆ ಬೇರೆ ರೀತಿಯ ದೇಹವಿದೆ ಮತ್ತು ಮಗುವಿಗೆ ಬೇರೆ ರೀತಿಯ ದೇಹವಿದೆ."
|