KN/681110 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಸಮಾಜದಲ್ಲಿ ಯಾರು ನಿಯಮಾಧೀನ ಬದ್ಧ ವ್ಯಕ್ತಿಗಳು, ಸ್ನೇಹ ಮತ್ತು ಪ್ರೀತಿ, ಇದು ಭೌತಿಕ ಜೀವನದ ಆಕರ್ಷಣೆಯಾಗಿದೆ." ಸಮಾಜ, ಸ್ನೇಹ ಮತ್ತು ಪ್ರೀತಿ, "ಮನುಷ್ಯನಿಗೆ ದೈವಿಕವಾಗಿ ದಯಪಾಲಿಸಲ್ಪಟ್ಟಿದೆ" ಎಂದು ಅವರು ಭಾವಿಸುತ್ತಾರೆ. ಆದರೆ ಅದು ಮನುಷ್ಯನಿಗೆ ದೈವಿಕವಾಗಿ ದಯಪಾಲಿಸಲ್ಪಟ್ಟಿಲ್ಲ. ಆಧ್ಯಾತ್ಮಿಕ ದೃಷ್ಟಿಕೋನದಿಂದ, ಇದು ಮಾಯೆಯ ಕೊಡುಗೆಯಾಗಿದೆ. ಸಮಾಜ, ಸ್ನೇಹ ಮತ್ತು ಪ್ರೀತಿಯು ಮಾಯೆಯ ಕೊಡುಗೆಯಾಗಿದೆ, ಭ್ರಮೆ. ವಾಸ್ತವವಾಗಿ, ನಾವು ಸೇರಿರುವ ಸಮಾಜ ಮತ್ತು ನಾವು ಇಲ್ಲಿ ಮಾಡುವ ಸ್ನೇಹ, ಮತ್ತು ಪ್ರೀತಿ ಎಂದು ಕರೆಯಲ್ಪಡುವದು ಎಷ್ಟು ಸಮಯದವರೆಗೆ ? ಈಗ, ನಾನು ಈಗ ಮಾನವ ಸಮಾಜದಲ್ಲಿದ್ದೇನೆ ಎಂದು ಭಾವಿಸೋಣ. ನಾನು ಎಷ್ಟು ದಿನ ಮಾನವ ಸಮಾಜದಲ್ಲಿ ಉಳಿಯುತ್ತೇನೆ? ನನ್ನ ಮುಂದಿನ ಜೀವನಕ್ಕೆ ಅಥವಾ ಮುಂದಿನ ಸಮಾಜಕ್ಕೆ ನಾನು ತಯಾರಿ ನಡೆಸುತ್ತಿದ್ದೇನೆ. ನನ್ನನ್ನು ನಾಯಿಯ ಸಮಾಜಕ್ಕೆ ವರ್ಗಾಯಿಸಬಹುದು. ಮತ್ತು ನಾನು ವರ್ಗಾಯಿಸಬಹುದು ..., ನಾನು ದೇವರ ಸಮಾಜಕ್ಕೆ ವರ್ಗಾಯಿಸಬಹುದು. ಅದು ನನ್ನ ಕೆಲಸದ ಮೇಲೆ ಅವಲಂಬಿತವಾಗಿರುತ್ತದೆ."
681110 - ಉಪನ್ಯಾಸ ಶ್ರೀ.ಭಾ.೦೩.೨೫.೧೩ - ಲಾಸ್ ಎಂಜಲೀಸ್