"ಕೃಷ್ಣ ಪ್ರಜ್ಞೆಯು ವಿಮೋಚನೆಯ ನಂತರದ ಒಂದು ಹಂತವಾಗಿದೆ. ಬ್ರಹ್ಮ-ಭೂತಃ. ಬ್ರಹ್ಮ-ಭೂತಃ ಎಂದರೆ " ನಾನು ಈಗ ಎಲ್ಲಾ ಭೌತಿಕ ಆತಂಕಗಳಿಂದ ಮುಕ್ತನಾಗಿದ್ದೇನೆ. "ಇದನ್ನು ಬ್ರಹ್ಮ-ಭೂತಃ ಹಂತ ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಯು ಹಲವು ವರ್ಷಗಳ ಕಾಲ ಜೈಲು ಜೀವನವನ್ನು ಅನುಭವಿಸುತ್ತಿರುವಂತೆಯೇ, ಮತ್ತು ಅವನಿಗೆ ಸ್ವಾತಂತ್ರ್ಯವನ್ನು ನೀಡಿದರೆ, "ಈಗ ನೀನು ಸ್ವತಂತ್ರ," ಅವನು ಎಷ್ಟು ಸಂತೋಷವನ್ನು ಅನುಭವಿಸುತ್ತಾನೆ: "ಓಹ್, ಈಗ ನಾನು ಸ್ವತಂತ್ರನಾಗಿದ್ದೇನೆ." ನೀವು ನೋಡಿ ? ಆದ್ದರಿಂದ ಅದು ಬ್ರಹ್ಮ-ಭೂತಃ ದ ಹಂತವಾಗಿದೆ. ಪ್ರಸನ್ನಾತ್ಮಾ, ಸಂತೋಷದಾಯಕ, ತಕ್ಷಣವೇ. ಮತ್ತು ಆ ಸಂತೋಷದ ಸ್ವರೂಪವೇನು? ನಾ ಶೋಚತಿ. ದೊಡ್ಡ ನಷ್ಟದಲ್ಲಿಯೂ ಸಹ ಪ್ರಲಾಪವಿಲ್ಲ. ಮತ್ತು ದೊಡ್ಡ ಲಾಭ, ಅಲ್ಲಿ ಹಿಗ್ಗಿಲ್ಲ, ಅಥವಾ ಅಲ್ಲಿ ಯಾವುದೇ ತೀವ್ರವಾದ ಬಯಕೆಗಳಿಲ್ಲ. ಅದನ್ನು ಬ್ರಹ್ಮ-ಭೂತಃ ಹಂತ ಎಂದು ಕರೆಯಲಾಗುತ್ತದೆ. "
|