KN/681123 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
ನರ-ನಾರಾಯಣ್: ರಾಧ, ರಾಧಿಕಾಗೆ ಭಕ್ತನ ಸಮಂಜಸವಾದ ಸಂಬಂಧ ಏನು?
ಪ್ರಭುಪಾದ: ರಾಧಾರಾಣಿ ದೈವೀ-ಮಾಯಾ. ನಮ್ಮಂತೆಯೇ, ನಮ್ಮ ನಿಯಮಬದ್ಧ ಭೌತಿಕ ಜೀವನದಲ್ಲಿ, ನಾವು ಭೌತಿಕ ಶಕ್ತಿಯ ಅಡಿಯಲ್ಲಿದ್ದೇವೆ. ಅಂತೆಯೇ, ನಮ್ಮ ವಿಮುಕ್ತ ಸ್ಥಿತಿಯಲ್ಲಿ ನಾವು ಆಧ್ಯಾತ್ಮಿಕ ಶಕ್ತಿಯ ಅಡಿಯಲ್ಲಿ ಬರಬೇಕು. ಆ ಆಧ್ಯಾತ್ಮಿಕ ಶಕ್ತಿಯು ರಾಧಾರಾಣಿ. ನಾವು ಪ್ರಸ್ತುತ ಕ್ಷಣದಲ್ಲಿ ಭೌತಿಕ ಶಕ್ತಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ, ಏಕೆಂದರೆ ನಮ್ಮ ದೇಹವು ಭೌತಿಕ ಶಕ್ತಿಯಿಂದ ಮಾಡಲ್ಪಟ್ಟಿದೆ. ಆದ್ದರಿಂದ ನೀವು ವಿಮುಕ್ತರಾದಾಗ ನಿಮ್ಮ ಆಧ್ಯಾತ್ಮಿಕ ಶಕ್ತಿಯ ದೇಹವನ್ನು ಅಭಿವೃದ್ಧಿಪಡಿಸುತ್ತೀರ. ಆ ಆಧ್ಯಾತ್ಮಿಕ ಶಕ್ತಿಯು ರಾಧಾರಾಣಿ. ಆದ್ದರಿಂದ ನೀವು ಕೆಲವರ ಅಡಿಯಲ್ಲಿ ..., ಕೆಲವು ಶಕ್ತಿಯ ನಿಯಂತ್ರಣದಲ್ಲಿರಬೇಕು. ನೀವು ಕೂಡ ಶಕ್ತಿಯೇ; ನೀವು ತಟಸ್ಥ ಶಕ್ತಿ. ತಟಸ್ಥ ಶಕ್ತಿ ಎಂದರೆ ನೀವು ಆಧ್ಯಾತ್ಮಿಕ ಶಕ್ತಿಯ ನಿಯಂತ್ರಣದಲ್ಲಿರಬಹುದು ಅಥವಾ ನೀವು ಭೌತಿಕ ಶಕ್ತಿಯ ನಿಯಂತ್ರಣದಲ್ಲಿರಬಹುದು-ನಿಮ್ಮ ತಟಸ್ಥ ಸ್ಥಾನ. ಆದರೆ ನೀವು ಭೌತಿಕ ಶಕ್ತಿಯ ನಿಯಂತ್ರಣದಲ್ಲಿರುವಾಗ, ಅದು ನಿಮ್ಮ ಅನಿಶ್ಚಿತ ಸ್ಥಿತಿ, ಅಸ್ತಿತ್ವಕ್ಕಾಗಿ ಹೋರಾಟ. ಮತ್ತು ನೀವು ಆಧ್ಯಾತ್ಮಿಕ ಶಕ್ತಿಯ ಅಡಿಯಲ್ಲಿದ್ದಾಗ, ಅದು ನಿಮ್ಮ ವಿಮೋಚನಾ ಜೀವನ. ರಾಧಾರಾಣಿ ಆಧ್ಯಾತ್ಮಿಕ ಶಕ್ತಿ, ಮತ್ತು ದುರ್ಗ ಅಥವಾ ಕಾಳಿ ಐಹಿಕ ಶಕ್ತಿ. |
681123 - ಉಪನ್ಯಾಸ ಭ. ಗೀತಾ ಯಥಾ ರೂಪ ಪ್ರಸ್ತಾವನೆ - ಲಾಸ್ ಎಂಜಲೀಸ್ |