KN/681127b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಮೃತ ದೇಹ, ದೇಹವು ಸತ್ತಿದೆ ಎಂದು ಅಂದುಕೊಳ್ಳಿ, ಅದಕ್ಕೆ ಯಾವುದೇ ಮೌಲ್ಯವಿಲ್ಲ. ಪ್ರಲಾಪದಿಂದ ಏನು ಪ್ರಯೋಜನ? ನೀವು ಸಾವಿರಾರು ವರ್ಷಗಳ ತನಕ ದುಃಖಿಸಬಹುದು, ಅದಕ್ಕೆ ಜೀವ ಬರುವುದಿಲ್ಲ. ಆದ್ದರಿಂದ ಮೃತ ದೇಹದ ಮೇಲೆ ದುಃಖಿಸಲು ಯಾವುದೇ ಕಾರಣವೂ ಇಲ್ಲ. ಮತ್ತು ಇಲ್ಲಿಯವರೆಗೆ ಆತ್ಮಕ್ಕೆ ಸಂಬಂಧಿಸಿದಂತೆ, ಅದು ಶಾಶ್ವತವಾಗಿದೆ. ಅದು ಸತ್ತಂತೆ ಕಾಣುತ್ತದೆ, ಅಥವಾ ಈ ದೇಹದ ಸಾವಿನೊಂದಿಗೆ ಅವನು ಸಾಯುವುದಿಲ್ಲ. ಆದ್ದರಿಂದ ಒಬ್ಬನು ಏಕೆ ಅತಿಯಾಗಿ ಮುಳುಗಬೇಕು, "ಓಹ್, ನನ್ನ ತಂದೆ ಸತ್ತರು, ನನ್ನ ಅಂತಹ- ಮತ್ತು ಅಂತಹ ಸಂಬಂಧಿ ಸತ್ತನು, "ಮತ್ತು ಅಳುತ್ತಿರುವುದು? ಅವನು ಸತ್ತಿಲ್ಲ. ಒಬ್ಬನು ಈ ಜ್ಞಾನವನ್ನು ಹೊಂದಿರಬೇಕು. ಆಗ ಅವನು ಎಲ್ಲಾ ಸಂದರ್ಭಗಳಲ್ಲಿಯೂ ಹರ್ಷಚಿತ್ತದಿಂದ ಇರುತ್ತಾನೆ, ಮತ್ತು ಅವನು ಕೇವಲ ಕೃಷ್ಣ ಪ್ರಜ್ಞೆಯಲ್ಲಿ ಆಸಕ್ತಿಯನ್ನು ಹೊಂದಿರುತ್ತಾನೆ. ದೇಹಕ್ಕೋಸ್ಕರ ವಿಷಾದಿಸಲು ಏನೂ ಇಲ್ಲ, ಜೀವಂತವಿರುವಾಗ ಅಥವಾ ಸತ್ತ ನಂತರ. ಅದನ್ನು ಈ ಅಧ್ಯಾಯದಲ್ಲಿ ಕೃಷ್ಣನು ಉಪದೇಶಿಸುತ್ತಿದ್ದಾನೆ."
681127 - ಉಪನ್ಯಾಸ ಭ. ಗೀತಾ ೦೨.೦೮-೧೨ - ಲಾಸ್ ಎಂಜಲೀಸ್