"ಅಲ್ಲಿ ಪ್ರಶ್ನೆಗಳು ಇರಲೇಬೇಕು. ಅದನ್ನು ಈ ಭಗವದ್ಗೀತೆಯಲ್ಲಿ ಉಲ್ಲೇಖಿಸಿದೆ, ತದ್ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೆನ ಸೇವಯಾ (ಭ. ಗೀತಾ ೪.೩೪). ನಿಮ್ಮ ಸಂಬಂಧವು ಆಧ್ಯಾತ್ಮಿಕ ಗುರುವಿನಿಂದ ಎಲ್ಲವನ್ನೂ ತಿಳಿದುಕೊಳ್ಳುವುದಕ್ಕಾಗಿ, ಆದರೆ ನೀವು ಅದನ್ನು ಮೂರು ವಿಷಯಗಳೊಂದಿಗೆ ತಿಳಿದುಕೊಳ್ಳಬೇಕು. ಏನದು? ಮೊದಲಿಗೆ ನೀವು ಶರಣಾಗಬೇಕು. ನೀವು ಆಧ್ಯಾತ್ಮಿಕ ಗುರುವನ್ನು ನಿಮಗಿಂತ ದೊಡ್ಡವರಾಗಿ ಸ್ವೀಕರಿಸಬೇಕು. ಇಲ್ಲದಿದ್ದರೆ ಒಬ್ಬ ಆಧ್ಯಾತ್ಮಿಕ ಗುರುವನ್ನು ಸ್ವೀಕರಿಸುವುದರಿಂದ ಏನು ಪ್ರಯೋಜನ? ಪ್ರಣಿಪತ್ ಎಂದರೆ ಶರಣಾಗತಿ; ಮತ್ತು ಪರಿಪ್ರಶ್ನ, ಮತ್ತು ಪ್ರಶ್ನಿಸುವುದು; ಮತ್ತು ಸೇವೆ, ಮತ್ತು ಸೇವೆ. ಸೇವೆ ಮತ್ತು ಶರಣಾಗತಿ ಎಂಬ ಎರಡು ಬದಿಗಳು ಇರಬೇಕು ಮತ್ತು ಮಧ್ಯದಲ್ಲಿ ಪ್ರಶ್ನೆ ಇರಬೇಕು. ಇಲ್ಲದಿದ್ದರೆ ಅಲ್ಲಿ ಯಾವುದೇ ಪ್ರಶ್ನೋತ್ತರಗಳಿಲ್ಲ. ಎರಡು ವಿಷಯಗಳು ಇರಬೇಕು: ಸೇವೆ ಮತ್ತು ಶರಣಾಗತಿ. ನಂತರ ಪ್ರಶ್ನೆಗೆ ಉತ್ತರ ಚೆನ್ನಾಗಿದೆ. "
|