KN/681202b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕಷ್ಟದ ಸ್ಥಿತಿಯಲ್ಲಿರುವಾಗ ನೀವು ಸ್ನೇಹಿತರ ಬಳಿಗೆ ಹೋದರೆ ಮತ್ತು ನೀವು ನಿಮ್ಮ ಸ್ನೇಹಿತನಿಗೆ ಶರಣಾಗಿ, 'ನನ್ನ ಪ್ರಿಯ ಸ್ನೇಹಿತನೇ, ನೀನು ತುಂಬಾ ಶ್ರೇಷ್ಠ, ಶಕ್ತಿಶಾಲಿ, ಪ್ರಭಾವಶಾಲಿ. ನಾನು ಈ ದೊಡ್ಡ ಅಪಾಯದಲ್ಲಿದ್ದೇನೆ. ಹಾಗಾಗಿ ನಾನು ನಿನಗೆ ಶರಣಾಗುತ್ತೇನೆ. ನೀನು ದಯವಿಟ್ಟು ನನಗೆ ರಕ್ಷಣೆ ನೀಡು... 'ಆದ್ದರಿಂದ ನೀವು ಅದನ್ನೇ ಕೃಷ್ಣನಲ್ಲಿ ಮಾಡಬಹುದು. ಇಲ್ಲಿ ಭೌತಿಕ ಜಗತ್ತಿನಲ್ಲಿ, ನೀವು ಒಬ್ಬ ವ್ಯಕ್ತಿಗೆ ಶರಣಾದರೆ, ಅವನು ಎಷ್ಟು ದೊಡ್ಡವನಾಗಿದ್ದರೂ ಅವನು ನಿರಾಕರಿಸಬಹುದು. ಅವನು ಹೇಳಬಹುದು,' ಸರಿ, ನಾನು ನಿನಗೆ ರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ'. ಅದು ಸ್ವಾಭಾವಿಕ ಉತ್ತರ. ನೀವು ಅಪಾಯದಲ್ಲಿದ್ದರೆ ಮತ್ತು 'ದಯವಿಟ್ಟು ನನಗೆ ರಕ್ಷಣೆ ನೀಡಿ' ಎಂದು ನಿಮ್ಮ ಆತ್ಮೀಯ ಗೆಳೆಯನ ಬಳಿಗೆ ಹೋದರೆ, ಅವನು ಹಿಂಜರಿಯುತ್ತಾನೆ, ಏಕೆಂದರೆ ಅವನ ಶಕ್ತಿ ತುಂಬಾ ಸೀಮಿತವಾಗಿದೆ. ಅವನು ಮೊದಲು ಯೋಚಿಸುವನು ಅದು 'ನಾನು ಈ ವ್ಯಕ್ತಿಗೆ ರಕ್ಷಣೆ ನೀಡಿದರೆ, ನನ್ನ ಆಸಕ್ತಿಗೆ ಧಕ್ಕೆಯಾಗುವುದಿಲ್ಲವೇ?' ಅವನು ಹಾಗೆ ಯೋಚಿಸುತ್ತಾನೆ, ಏಕೆಂದರೆ ಅವನ ಸಾಮರ್ಥ್ಯವು ಸೀಮಿತವಾಗಿದೆ. ಆದರೆ ಕೃಷ್ಣ ತುಂಬಾ ಒಳ್ಳೆಯವನು, ಅವನು ತುಂಬಾ ಶಕ್ತಿಶಾಲಿ, ಅವನು ತುಂಬಾ ಶ್ರೀಮಂತ ... ಅವನು ಭಗವದ್ಗೀತೆಯಲ್ಲಿ ಘೋಷಿಸಿದ್ದಾನೆ, ಎಲ್ಲರೂ, ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ (ಭ.ಗೀತಾ ೧೮.೬೬): 'ನೀನು ಎಲ್ಲವನ್ನೂ ಬದಿಗಿರಿಸಿ. ಸುಮ್ಮನೆ ನನ್ನಲ್ಲಿ ಶರಣಾಗು'.
681202 - ಉಪನ್ಯಾಸ ಭ. ಗೀತಾ ೦೭.೦೧ - ಲಾಸ್ ಎಂಜಲೀಸ್