KN/681202c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಸೇವೆಯನ್ನು - ಒದಗಿಸುವ ಪ್ರಕ್ರಿಯೆಯು ಎಲ್ಲೆಡೆಯೂ ನಡೆಯುತ್ತಿದೆ. ಅವನು ಯಾರಿಗೂ ಸೇವೆಯನ್ನು ನೀಡುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಯಾರೂ ಪರಿಪೂರ್ಣರಲ್ಲ. ಅದು ಸಾಧ್ಯವಿಲ್ಲ. ಯಾರಾದರೂ ಸೇವೆ ಮಾಡಲು ಯಜಮಾನ ಇಲ್ಲದಿದ್ದರೆ, ಅವರು ಸ್ವಯಂಪ್ರೇರಣೆಯಿಂದ ಬೆಕ್ಕು ಅಥವಾ ನಾಯಿಯನ್ನು ತಮ್ಮ ಯಜಮಾನನಂತೆ ಸ್ವೀಕರಿಸುತ್ತಾರೆ ಎಂದು ನಾನು ಪದೇ ಪದೇ ವಿವರಿಸಿದ್ದೇನೆ. ಒಳ್ಳೆಯ ಹೆಸರು "ಸಾಕು ನಾಯಿ", ಆದರೆ ಅದು ಸೇವೆ ಸಲ್ಲಿಸುತ್ತಿದೆ. ತಾಯಿ ಮಗುವಿಗೆ ಸೇವೆ ಸಲ್ಲಿಸುತ್ತಾಳೆ. ಆದ್ದರಿಂದ ಯಾರೊಬ್ಬನಿಗೆ ಮಗುವಿಲ್ಲವೋ ಅವನು ಬೆಕ್ಕನ್ನು ತೆಗೆದುಕೊಂಡು ಅದನ್ನು ತನ್ನ ಮಗುವಿನಂತೆ ಸೇವೆ ಮಾಡುತ್ತಾನೇ. ಆದ್ದರಿಂದ ಸೇವಾ ಮನಸ್ಥಿತಿಯು ಎಲ್ಲೆಡೆ ನಡೆಯುತ್ತಿದೆ. ಆದರೆ ಸರ್ವೋಚ್ಚ ಪರಿಪೂರ್ಣನಾದ ಭಗವಂತನನ್ನು ಸೇವೆ ಮಾಡಲು ನಾವು ಕಲಿತಾಗ ಅದು ಸೇವೆಯ ಅತ್ಯುನ್ನತ ಪರಿಪೂರ್ಣತೆಯಾಗಿದೆ.ಅದನ್ನು ಭಕ್ತಿ ಎಂದು ಕರೆಯಲಾಗುತ್ತದೆ. ಮತ್ತು ಆ ಭಕ್ತಿ, ಭಗವಂತನಿಗೆ ಸೇವೆಯನ್ನು ಕಾರ್ಯಗತಗೊಳಿಸುವುದು, ಅಹೈತುಕಿ. ನಾವು ಕೆಲವು ಸಣ್ಣ ಉದಾಹರಣೆಗಳನ್ನು ಪಡೆದಂತೆಯೇ. ನಿರೀಕ್ಷಣೆಗಳಿಲ್ಲದೆ ಈ ತಾಯಿಯು ಮಗುವಿಗೆ ಸೇವೆ ಸಲ್ಲಿಸುತ್ತಿದ್ದಾಳೆ. "
681202 - ಉಪನ್ಯಾಸ ಶ್ರೀ.ಭಾ. ೦೨.೦೨.೦೫ - ಲಾಸ್ ಎಂಜಲೀಸ್