KN/681209 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಒಬ್ಬ ವೈಷ್ಣವ, ಅಥವಾ ಭಗವಂತನ ಭಕ್ತ, ಅವನ ಜೀವನವು ಜನರ ಹಿತಕ್ಕಾಗಿ ಮೀಸಲಾಗಿರುತ್ತದೆ. ನಿಮಗೆ ತಿಳಿದಿದೆ-ನಿಮ್ಮಲ್ಲಿ ಹೆಚ್ಚಿನವರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು-ಹೇಗೆ ಕರ್ತನಾದ ಯೇಸು ಕ್ರಿಸ್ತನು, ನಿಮ್ಮ ಪಾಪ ಚಟುವಟಿಕೆಗಳಿಗಾಗಿ ಅವನು ತನ್ನನ್ನು ತ್ಯಾಗ ಮಾಡಿದೆನೆಂದು ಹೇಳಿದನು. ಅದು ಭಗವಂತನ ಭಕ್ತರ ನಿಶ್ಚಯ. ಅವರು ವೈಯಕ್ತಿಕ ಸೌಕರ್ಯಗಳಿಗೆ ಹೆದರುವುದಿಲ್ಲ. ಏಕೆಂದರೆ ಅವರು ಕೃಷ್ಣ ಅಥವಾ ದೇವರನ್ನು ಪ್ರೀತಿಸುತ್ತಾರೆ, ಆದ್ದರಿಂದ ಅವರು ಎಲ್ಲಾ ಜೀವಿಗಳನ್ನು ಪ್ರೀತಿಸುತ್ತಾರೆ, ಏಕೆಂದರೆ ಎಲ್ಲಾ ಜೀವಿಗಳು ಕೃಷ್ಣನ ಜೊತೆ ಸಂಬಂಧ ಹೊಂದಿವೆ. ಆದ್ದರಿಂದ ಅದೇ ರೀತಿ ನೀವು ಕಲಿಯಬೇಕು. ಈ ಕೃಷ್ಣ ಪ್ರಜ್ಞೆ ಆಂದೋಲನ ಎಂದರೆ ವೈಷ್ಣವನಾಗುವುದು ಮತ್ತು ಬಳಲುತ್ತಿರುವ ಮಾನವಕುಲಕ್ಕೆ ಕರುಣಿಸಬೇಕು."
ಉಪನ್ಯಾಸ ತಿರೋಭಾವ ಜಯಂತಿ, ಭಕ್ತಿಸಿದ್ಧಾಂತ ಸರಸ್ವತಿ - ಲಾಸ್ ಎಂಜಲೀಸ್