"ವಿಷಯಗಳು ಈ ಹಂತಕ್ಕೆ ಬಂದಿವೆ, ಈ ವೃದ್ಧಾಪ್ಯದಲ್ಲಿ ನಾನು ನಿಮ್ಮ ದೇಶಕ್ಕೆ ಬಂದಿದ್ದೇನೆ, ಮತ್ತು ನೀವು ಸಹ ಈ ಆಂದೋಲನವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೀರಿ, ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ. ನಾವು ಈಗ ಕೆಲವು ಪುಸ್ತಕಗಳನ್ನು ಹೊಂದಿದ್ದೇವೆ. ಆದ್ದರಿಂದ ಈ ಚಳವಳಿಗೆ ಸ್ವಲ್ಪ ಗಟ್ಟಿಯಾದ ಸ್ಥಾನವಿದೆ. ಈಗ ನನ್ನ ಆಧ್ಯಾತ್ಮಿಕ ಗುರುಗಳ ತಿರೋಭಾವದ ಈ ಸಂದರ್ಭದಲ್ಲಿ, ನಾನು ಅವರ ಇಚ್ಛೆಯನ್ನು ಕಾರ್ಯಗತಗೊಳಿಸಲು ಹೇಗೆ ಪ್ರಯತ್ನಿಸುತ್ತಿದ್ದೀನೋ, ಅದೇ ರೀತಿ, ನನ್ನ ಇಚ್ಛೆಯನ್ನು ಕಾರ್ಯಗತಗೊಳಿಸಬೇಕೆಂದು ನಾನು ಸಹ ನಿಮ್ಮನ್ನು ವಿನಂತಿಸುತ್ತೇನೆ. ನಾನೊಬ್ಬ ವೃದ್ಧ ಮನುಷ್ಯ. ನಾನು ಯಾವುದೇ ಕ್ಷಣದಲ್ಲಿ ನಿಧನ ಹೊಂದಬಹುದು. ಅದು ಪ್ರಕೃತಿಯ ನಿಯಮ. ಯಾರೂ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದ್ದರಿಂದ ಅದು ತುಂಬಾ ಆಶ್ಚರ್ಯಕರವಲ್ಲ. ಆದರೆ ನಾನು ನಿಮ್ಮಲ್ಲಿ ಮಾಡುತ್ತಿರುವ ಮನವಿ ಎಂದರೆ ನನ್ನ ಗುರು ಮಹಾರಾಜರ ನಿರ್ಗಮನದ ಈ ಶುಭ ದಿನದಂದು , ಕನಿಷ್ಠ ಸ್ವಲ್ಪ ಮಟ್ಟಿಗೆ ನೀವು ಕೃಷ್ಣ ಪ್ರಜ್ಞೆ ಚಳುವಳಿಯ ಸಾರವನ್ನು ಅರ್ಥಮಾಡಿಕೊಂಡಿದ್ದೀರಿ. ನೀವು ಅದನ್ನು ಮುಂದುವರಿಸಲು ಪ್ರಯತ್ನಿಸಬೇಕು. "
|