"ನಾನು ಅರ್ಧದಷ್ಟು ನೀರು, ಅರ್ಧ ಹಾಲು ಇಡುತ್ತೇನೆ " ಎಂದು ನೀವು ಭಾವಿಸಿದರೆ, ಹಾಗೆ ಮಾಡಬಹುದು ಆದರೆ ಇವೆರಡರ ಸಾರ ಕುಂದುತ್ತದೆ ಅಥವಾ ಕಲುಷಿತವಾಗುತ್ತದೆ. ನೀವು ಹಾಲನ್ನು ಇಡಲು ಬಯಸಿದರೆ, ನೀವು ನೀರನ್ನು ಹೊರಹಾಕಬೇಕು, ಮತ್ತು ನೀವು ನೀರನ್ನು ಉಳಿಸಿಕೊಳ್ಳಲು ಬಯಸಿದರೆ, ಆಗ ನೀವು ಹಾಲನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ, ಭಕ್ತಿ ಪರೇಶಾನುಭವ. ಇದೆ ಪರೀಕ್ಷೆ. ನೀವು ಕೃಷ್ಣ ಪ್ರಜ್ಞಾಯುಕ್ತನಾದಲ್ಲಿ, ನೀವು ಆಧ್ಯಾತ್ಮಿಕ ಜೀವನದಲ್ಲಿ ಸುಧಾರಿಸುತ್ತಿದ್ದರೆ, ಪ್ರಮಾಣಾನುಗುಣವಾಗಿ ನೀವು ಭೌತಿಕ ಜೀವನ ವಿಧಾನದಿಂದ ದೂರವಾಗುವಿರಿ. ಅದೇ ಪರೀಕ್ಷೆ. "ನಾನು ತುಂಬಾ ಧ್ಯಾನ ಮಾಡುತ್ತಿದ್ದೇನೆ, ನಾನು ತುಂಬಾ ಒಳ್ಳೆಯ ಮುನ್ನಡೆ ಸಾಧಿಸುತ್ತಿದ್ದೇನೆ" ಎಂದು ಸುಮ್ಮನೆ ಯೋಚಿಸುವುದಲ್ಲ. ನೀವು ಪರೀಕ್ಷಿಸಬೇಕಾಗಿದೆ. ಪರೀಕ್ಷೆ ಎಂದರೆ ನಿಮ್ಮ ... ಆಧ್ಯಾತ್ಮಿಕ ಜೀವನದ ಸುಧಾರಣೆ ಎಂದರೆ ನೀವು ಭೌತಿಕ ಜೀವನ ವಿಧಾನದಿಂದ ದೂರವಾಗುವುದು ಎಂದು."
|