"ಆದ್ದರಿಂದ ಇದೇ ಅವಕಾಶ. ನೀವು ಮಾನವ ರೂಪದ ಜೀವನವನ್ನು ಪಡೆದುಕೊಂಡಿದ್ದೀರಿ. ಈಗ ನೀವು ನಮ್ಮ ಒಡನಾಟವನ್ನು ಪಡೆದುಕೊಂಡಿದ್ದೀರಿ. ಭಗವದ್ಗೀತೆಯಿಂದ ನೀವು ಎಲ್ಲಾ ಮಾಹಿತಿಯನ್ನು ಪಡೆದುಕೊಂಡಿದ್ದೀರಿ. ಆದ್ದರಿಂದ ಅಲ್ಲಿ ಅವಕಾಶವಿದೆ. ಈಗ ನೀವು ಅದನ್ನು ಬಳಸಿಕೊಳ್ಳದಿದ್ದರೆ, ನೀವು ನಿಮ್ಮ ಆತ್ಮಹತ್ಯೆ ಮಾಡಿಕೊಂಡಂತೆ. ಯಾರೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ಇಲ್ಲದಿದ್ದರೆ, ನೀವು ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು ಮತ್ತು ನೇರವಾಗಿ ಕೃಷ್ಣನಲ್ಲಿಗೆ ಹೋಗಬಹುದು. ಆದ್ದರಿಂದ ಇದೆ ಪ್ರಕ್ರಿಯೆ. ದೀಕ್ಷೆ ಎಂದರೆ ಆ ಪರಿಪೂರ್ಣತೆಯ ಪ್ರಾರಂಭ. ಒಬ್ಬರು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು, ನಂತರ ಯಾವುದೇ ಸಂದೇಹವಿಲ್ಲ. ಭಗವದ್ಗೀತೆಯಲ್ಲಿ ಈ ಭರವಸೆಯನ್ನು ನೀಡಲಾಗಿದೆ. ನೀವು ಕೃಷ್ಣನನ್ನು ನಂಬಿದಲ್ಲಿ ಕೃಷ್ಣನು ಭರವಸೆಯನ್ನು ನೀಡುತ್ತಿದ್ದಾನೆ, ಆ ದೇವೋತ್ತಮ ಪರಮ ಪುರುಷನನ್ನು ನೀವು ನಂಬಿದರೆ, ಆಗ ಯಾವುದೇ ಸಂದೇಹವಿರುವುದಿಲ್ಲ. ಮತ್ತು ನಾವು ಕೃಷ್ಣ ಪ್ರಜ್ಞೆಯನ್ನು ಕಾರ್ಯಗತಗೊಳಿಸೋಣ ಮತ್ತು ನಿಯಮ ಮತ್ತು ನಿಯಂತ್ರಣಗಳನ್ನು ಅನುಸರಿಸೋಣ, ಮತ್ತು ಆಗ ಜೀವನವು ಖಚಿತವಾಗಿ ಯಶಸ್ವಿಯಾಗುತ್ತದೆ. "
|