KN/681220 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಇದು ಬಹಳ ಮುಖ್ಯವಾದ ಅಂಶವಾಗಿದೆ. ಕೆಲವೊಮ್ಮೆ ಆಧ್ಯಾತ್ಮಿಕ ಜೀವನವು ಸಕ್ರಿಯ ಜೀವನದಿಂದ ನಿವೃತ್ತಿ ಹೊಂದುವುದು ಎಂದು ಭಾವಿಸಲಾಗಿದೆ. ಅದು ಸಾಮಾನ್ಯ ಅನಿಸಿಕೆ. ಜನರು ಆಧ್ಯಾತ್ಮಿಕ ಜ್ಞಾನವನ್ನು ಬೆಳೆಸಲು ಅಥವಾ ಸ್ವಯಂ ಸಾಕ್ಷಾತ್ಕಾರಕ್ಕಾಗಿ ಅವರು ಕೆಲವು ಹಿಮಾಲಯದಲ್ಲಿನ ಗುಹೆಗಳಿಗೆ ಅಥವಾ ಕೆಲವು ಏಕಾಂತ ಸ್ಥಳಗಳಿಗೆ ಹೋಗಬೇಕು ಎಂದು ಭಾವಿಸುತ್ತಾರೆ. ಅದನ್ನೂ ಸಹ ಶಿಫಾರಸು ಮಾಡಲಾಗಿದೆ.ಆದರೆ ಕೃಷ್ಣ ಪ್ರಜ್ಞೆಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಾಧ್ಯವಾಗದ ವ್ಯಕ್ತಿಗಳಂಥವರಿಗೆ ಆ ರೀತಿಯ ಶಿಫಾರಸು ಮಾಡಲಾಗಿದೆ. ಭಗವಾನ್ ಕೃಷ್ಣನು ಅರ್ಜುನನಿಗೆ ಒಬ್ಬನು ತನ್ನ ಸ್ಥಾನದಲ್ಲಿ ಹೇಗೆ ಉಳಿಯಬಹುದು ಎಂಬುದನ್ನು ಭೋದಿಸುತ್ತಿದ್ದಾನೆ. ಅವನು ಏನೇ ಇರಲಿ ಪರವಾಗಿಲ್ಲ, ಆದರೂ ಅವನು ಕೃಷ್ಣ ಪ್ರಜ್ಞೆಯಲ್ಲಿ ಸಂಪೂರ್ಣತೆಗೆ ಬರಲು ಸಾಧ್ಯ."
681220 - ಉಪನ್ಯಾಸ ಭ. ಗೀತಾ ೦೩.೦೧-೫ - ಲಾಸ್ ಎಂಜಲೀಸ್