"ತುಂಟ ಹುಡುಗನಂತೆ. ಬಲವಂತದಿಂದ, ನೀವು ಅವನ ಚೇಷ್ಟೆಯ ವರ್ತನೆಯನ್ನು ನಿಲ್ಲಿಸಬಹುದು. ಆದರೆ ಅವನಿಗೆ ಅವಕಾಶ ಸಿಕ್ಕ ಕೂಡಲೇ ಮತ್ತೆ ಅವನು ಹಾಗೆಯೇ ವರ್ತಿಸುತ್ತಾನೆ. ಅದೇ ರೀತಿ ಇಂದ್ರಿಯಗಳು ತುಂಬಾ ಪ್ರಬಲವಾಗಿವೆ. ನೀವು ಅವುಗಳನ್ನು ಕೃತಕವಾಗಿ ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಒಂದೇ ಪರಿಹಾರ ಎಂದರೆ ಕೃಷ್ಣ ಪ್ರಜ್ಞೆ. ಕೃಷ್ಣ ಪ್ರಜ್ಞೆಯಲ್ಲಿರುವ ಈ ಹುಡುಗರು, ಒಳ್ಳೆಯ ಪ್ರಸಾದವನ್ನು ತಿನ್ನುವುದು, ನೃತ್ಯ ಮಾಡುವುದು, ಜಪಿಸುವುದು, ತತ್ವಶಾಸ್ತ್ರವನ್ನು ಓದುವುದು, ಇವೆಲ್ಲವೂ ಇಂದ್ರಿಯ ತೃಪ್ತಿಯೇ-ಆದರೆ ಇವೆಲ್ಲವೂ ಕೃಷ್ಣನಿಗೆ ಸಂಬಂಧಿಸಿದಂತೆ. ಅದೇ ಮಹತ್ವ. ನಿರ್ಬಂಧಃ ಕೃಷ್ಣ-ಸಂಬಂಧೆ (ಭಕ್ತಿ-ರಸಾಂಮೃತ-ಸಿಂಧು 1.2.255). ಇದು ಕೃಷ್ಣನ ಇಂದ್ರಿಯ ತೃಪ್ತಿ. ನೇರವಾಗಿ ಅಲ್ಲ, ಆದರೆ ನಾನು ಕೃಷ್ಣನ ಭಾಗಾಂಶವಾಗಿರುವ ಕಾರಣದಿಂದ, ನನ್ನ ಇಂದ್ರಿಯಗಳು ಸ್ವಯಂಚಾಲಿತವಾಗಿ ತೃಪ್ತಿಗೊಳ್ಳುತ್ತವೆ. ಈ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬೇಕು. ಕೃತಕವಾಗಿ ... ಈ ಕೃಷ್ಣ ಪ್ರಜ್ಞೆ ಚಳುವಳಿ ಜೀವನದ ಒಂದು ಕಲೆ, ಅದರ ಮೂಲಕ ನಿಮ್ಮ ಇಂದ್ರಿಯಗಳು ಸಂಪೂರ್ಣವಾಗಿ ತೃಪ್ತಿ ಹೊಂದಿದೆಯೆಂದು ನೀವು ಭಾವಿಸುವಿರಿ, ಆದರೆ ನೀವು ಮುಂದಿನ ಜೀವನದಲ್ಲಿ ಮುಕ್ತರಾಗುತ್ತೀರಿ. ಇದು ಒಳ್ಳೆಯ ಪ್ರಕ್ರಿಯೆ. "
|