KN/681223b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣ ಅರ್ಜುನನಿಗಾಗಿ ಹೋರಾಡಬಲ್ಲನು, ಅವನು ಸರ್ವಶಕ್ತನಾಗಿದ್ದನು. ಹೋರಾಡದೆ, ಅವನಿಗೆ ಎಲ್ಲವನ್ನೂ ಅವನು ಕೊಡಬಲ್ಲನು. ಆದರೂ, ಅವನನ್ನು ತೊಡಗಿಸಿಕೊಳ್ಳಲು ಅವನು ಬಯಸಿದನು. ಒಬ್ಬನು ತನ್ನ ನಿಗದಿತ ಕರ್ತವ್ಯಗಳ ಜೊತೆಗೆ ಕೃಷ್ಣ ಪ್ರಜ್ಞೆಯಲ್ಲಿ ತೊಡಗಿಸಿಕೊಳ್ಳಬೇಕು, ಅದು ಅಗತ್ಯವಾಗಿರುತ್ತದೆ. ಹೌದು. "ನಿಮ್ಮ ನಿಗದಿತ ಕರ್ತವ್ಯವನ್ನು ನಿರ್ವಹಿಸಿ, ಅದು ಕೆಲಸ ಮಾಡದೆ ಇರುವುದಕ್ಕಿಂತ ಉತ್ತಮವಾಗಿದೆ." ನೀವು ಕೃಷ್ಣ ಪ್ರಜ್ಞೆಯಲ್ಲಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ, ನೀವು ವರ್ಣಾಶ್ರಮದ ಪ್ರಕಾರ ನಿಮ್ಮ ನಿಗದಿತ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿ. ಹೇಗೆ, ನೀವು ಬ್ರಾಹ್ಮಣನಾಗಿದ್ದರೆ, ನಿಮ್ಮ ನಡತೆ ಅದೇ ರೀತಿಯಲ್ಲಿ ಇರಬೇಕು. ನೀವು ಕ್ಷತ್ರಿಯನಾಗಿದ್ದರೆ, ನೀವು ಆ ಮಾರ್ಗದಲ್ಲೆ ಕೆಲಸ ಮಾಡಬೇಕು. ಆದರೆ ಕೆಲಸ ಮಾಡುವುದನ್ನು ನಿಲ್ಲಿಸಬೇಡಿ. "ಮನುಷ್ಯನು ಕೆಲಸವಿಲ್ಲದೆ ತನ್ನ ದೈಹಿಕ ದೇಹವನ್ನು ಸಹ ಕಾಪಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ಕೃಷ್ಣನು ಹೇಳುತ್ತಾನೆ."
681223 - ಉಪನ್ಯಾಸ ಭ. ಗೀತಾ ೦೩.೦೬-೧೦ - ಲಾಸ್ ಎಂಜಲೀಸ್