KN/681228 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಕೃಷ್ಣನು ಹೇಳುತ್ತಿದ್ದಾನೆ ನಾವು ಕೃಷ್ಣ ಪ್ರಜ್ಞೆಯ ಜನರು ಎಂದು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ಕೃಷ್ಣನು ಏನು ಹೇಳುತ್ತಾನೋ ನಾವು ಅದನ್ನು ಸಂಪೂರ್ಣ ಸತ್ಯವೆಂದು ಪರಿಗಣಿಸುತ್ತೇವೆ. ಆದ್ದರಿಂದ, ಕೃಷ್ಣನು ಹೇಳುತ್ತಾನೆ, ನೀವು ಬ್ರಹ್ಮಲೋಕ ಎಂದು ಕರೆಯಲ್ಪಡುವ ಅತ್ಯುನ್ನತ ಗ್ರಹವನ್ನು ತಲುಪಲು ಪ್ರಯತ್ನಿಸಿದರೂ ಸಹ. ವೈದಿಕ ಸಾಹಿತ್ಯದ ಪ್ರಕಾರ ಅನೇಕ ಗ್ರಹಗಳ ವ್ಯವಸ್ಥೆಗಳಿವೆ. ನಾವು ಈಗ ಇರುವ ಗ್ರಹ ವ್ಯವಸ್ಥೆಯನ್ನು ಇದನ್ನು ಭೂರ್ -ಲೋಕಾ ಎಂದು ಕರೆಯಲಾಗುತ್ತದೆ. ಈ ಗ್ರಹದ ಮೇಲಿರುವ ವ್ಯವಸ್ಥೆಯು ಭುವರ್-ಲೋಕಾ. ಆ ಗ್ರಹದ ಮೇಲೆ ಸ್ವರ್ಗಲೋಕವಿದೆ. ಈ ಚಂದ್ರನು ಸ್ವರ್ಗಲೋಕ ಗ್ರಹ ವ್ಯವಸ್ಥೆಗೆ ಸೇರಿದವನು. ಸ್ವರ್ಗಲೋಕದ ಮೇಲೆ ಜನಲೋಕವಿದೆ. ನಂತರ ಅದರ ಮೇಲೆ ಮಹರ್ಲೋಕವಿದೆ, ಅದರ ಮೇಲೆ ಸತ್ಯಲೋಕವಿದೆ."
681228 - ದೀಕ್ಷಾ ಉಪನ್ಯಾಸ - ಲಾಸ್ ಎಂಜಲೀಸ್