"ಆದ್ದರಿಂದ ಒಂದು ದಿನ ಇಡೀ ಜಗತ್ತು ಬೆಣ್ಣೆ ಅಥವಾ ಅಕ್ಕಿ ಅಥವಾ ಗೋಧಿಯನ್ನು ನೋಡುವುದಿಲ್ಲ. ಎಲ್ಲವೂ ಮುಗಿದಿರುತ್ತದೆ, ಏಕೆಂದರೆ ಕಲಿ ಯುಗದ ಪ್ರಗತಿಯೊಂದಿಗೆ ಎಲ್ಲವೂ ಎಷ್ಟು ಹದಗೆಡುತ್ತದೆ ಎಂದರೆ ಎಲ್ಲಾ ಸರಬರಾಜುಗಳು ವ್ಯಾವಹಾರಿಕವಾಗಿ ನಿಂತುಹೋಗುತ್ತವೆ. ಆ ಸಮಯದಲ್ಲಿ ಜನರು ಪ್ರಾಣಿಗಳಂತೆಯೇ ಬದುಕುವರು.ಆದ್ದರಿಂದ ಕೃಷ್ಣ ಪ್ರಜ್ಞೆ ಒಂದೇ ಏಕೈಕ ಮಾರ್ಗ. ಈ ಯುಗದಲ್ಲಿ, ಸರಳವಾಗಿ, ನೀವು ಯಾವುದೇ ಸ್ಥಿತಿಯಲ್ಲಿರಿ, ನೀವು ಸುಮ್ಮನೆ ಕುಳಿತು ಜಪಿಸಬಹುದು. ಯಾವುದೇ ಖರ್ಚಿಲ್ಲ; ನಷ್ಟವಿಲ್ಲ. ಸುಮ್ಮನೆ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಎಂದು ಜಪಿಸಿ, ಮತ್ತು ಎಲ್ಲಾ ದೇವತೆಗಳೂ ಮತ್ತು ದೇವೋತ್ತಮ ಪರಮ ಪುರುಷ, ಪ್ರತಿಯೊಬ್ಬರೂ ತೃಪ್ತರಾಗುತ್ತಾರೆ. ನಿಮಗೆ ಯಾವುದೇ ತೊಂದರೆ ಇರುವುದಿಲ್ಲ."
|