"ಭಕ್ತ ಎಂದರೆ ಅವನಿಗೆ ದೇವರೊಂದಿಗಿನ ಸಂಬಂಧದ ಬಗ್ಗೆ ದೃಡವಾಗಿ ಮನವರಿಕೆಯಾಗಿದೆ. ಮತ್ತು ಆ ಸಂಬಂಧ ಏನು? ಆ ಸಂಬಂಧವು ಪ್ರೀತಿಯ ಆಧಾರದಮೇಲಿದೆ. ಭಕ್ತನು ದೇವರನ್ನು ಪ್ರೀತಿಸುತ್ತಾನೆ, ಮತ್ತು ದೇವರು ಭಕ್ತನನ್ನು ಪ್ರೀತಿಸುತ್ತಾನೆ. ಇದು ಒಂದೇ ಸಂಬಂಧ. ಅಷ್ಟೆ. ಭಕ್ತನ ಹಿಂದೆ ದೇವರು, ಮತ್ತು ದೇವರ ಹಿಂದೆ ಭಕ್ತ. ಇದೇ. ಆದ್ದರಿಂದ ಒಬ್ಬರು ಈ ಸಂಬಂಧವನ್ನು ಸ್ಥಾಪಿಸಬೇಕು. ಅರ್ಜುನನು ಕೃಷ್ಣನೊಂದಿಗೆ ಸ್ನೇಹಿತನಂತೆ ಸಂಬಂಧವಿರುವ ಹಾಗೆ, ಅದೇ ರೀತಿಯಲ್ಲಿ ನೀವು ಪ್ರೇಮಿಯಾಗಿ ದೇವರೊಂದಿಗೆ ಸಂಬಂಧವನ್ನು ಹೊಂದಬಹುದು.ನೀವು ದೇವರ ಜೊತೆ ಯಜಮಾನನ ಮತ್ತು ಸೇವಕನ ಸಂಬಂಧದಲ್ಲಿರಬಹುದು.ನೀವು ದೇವರೊಂದಿಗೆ ತಂದೆ ಮತ್ತು ಮಗನಾಗಿ ಸಂಬಂಧ ಹೊಂದಬಹುದು. ಹಲವು ಸಂಬಂಧಗಳಿವೆ. ಯಾವ ರೀತಿಯಲ್ಲಿ ಈ ಭೌತಿಕ ಜಗತ್ತಿನಲ್ಲಿ ನಾವು ಸಂಬಂಧವನ್ನು ಹೊಂದಿದ್ದೇವೋ, ಇದು ದೇವರೊಂದಿಗಿನ ಆ ಐದು ಸಂಬಂಧದ ವಿಕೃತ ಪ್ರತಿಬಿಂಬವಾಗಿದೆ.ಆದರೆ ನಾವು ಅದನ್ನು ಮರೆತಿದ್ದೇವೆ ಅದು. ಈ ಕೃಷ್ಣ ಪ್ರಜ್ಞೆಯ ಆಂದೋಲನವು ಆ ಪ್ರಜ್ಞೆಯನ್ನು ಪುನರುಜ್ಜೀವನಗೊಳಿಸುವುದು. ಇದು ಹೊಸತೇನಲ್ಲ. ಇದು ಕೇವಲ ಹುಚ್ಚುತನದ ಮನುಷ್ಯನನ್ನು ಜೀವನದ ಸಾಮಾನ್ಯ ಸ್ಥಿತಿಗೆ ತರುವುದು. ದೇವರನ್ನು ಮರೆತುಬಿಡುವುದು ಎಂದರೆ ಅದು ಅಸಹಜ ಸ್ಥಿತಿ, ಮತ್ತು ದೇವರೊಂದಿಗೆ ಸಂಬಂಧವನ್ನು ಹೊಂದುವುದು ಸಹಜ ಸ್ಥಿತಿ. "
|