KN/690106 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಯಾವಾಗಾದರೂ ಮತ್ತು ಎಲ್ಲಿಯಾದರೂ ಧಾರ್ಮಿಕ ಆಚರಣೆಯಲ್ಲಿ ಇಳಿಮುಖವಾದಾಗಲೆಲ್ಲಾ ..." ಆ ಧಾರ್ಮಿಕ ಆಚರಣೆ ಏನು? ಆ ಧರ್ಮದ ಆಚರಣೆ ಅಂದರೆ ದೇವರ ಮೇಲೆ ಪ್ರೀತಿ ಕ್ಷೀಣಿಸಿದಾಗಲೆಲ್ಲಾ. ಅಷ್ಟೇ. ಜನರು ದುರ್ಧನ‌, ಐಹಿಕ ವಿಷಯಗಳ ಪ್ರೇಮಿಗಳಾದರು ಅಂದರೆ ಧರ್ಮದ ಅವನತಿ. ಮತ್ತು ಯಾವಾಗ ಜನರು ಪರಮಾತ್ಮನನ್ನು ಅಧಿಕವಾಗಿ ಪ್ರೀತಿಸುವರೋ, ಅದು ನಿಜವಾದ ಧರ್ಮ. ಆದ್ದರಿಂದ ವಿಷಯಗಳನ್ನು ಸರಿಪಡಿಸಲು ಕೃಷ್ಣನು ಬರುತ್ತಾನೆ, ಅಥವಾ ಕೃಷ್ಣನ ಸೇವಕ ಅಥವಾ ಪ್ರತಿನಿಧಿ ಬರುತ್ತಾನೆ. ಜನರು ದೇವರ ಮೇಲಿನ ಪ್ರೀತಿಯನ್ನು ಮರೆತಾಗ, ಯಾರಾದರೂ, ಕೃಷ್ಣ, ದೇವರೇ ಸ್ವತಃ ಅಥವಾ ಅವನ ಪ್ರತಿನಿಧಿಗಳು ವಿಷಯಗಳನ್ನು ಸರಿಪಡಿಸಲು ಬರುತ್ತಾರೆ. ಆದ್ದರಿಂದ ಈ ಕೃಷ್ಣ ಪ್ರಜ್ಞೆ ಆಂದೋಲನ ಒಂದು ಅವತಾರವಾಗಿದೆ. ಅವರು ಪರಮಾತ್ಮನ ಪ್ರೀತಿಯನ್ನು ಕಲಿಸುತ್ತಿದ್ದಾರೆ. ನಾವು, "ನೀವು ಹಿಂದೂಗಳಾಗಿ," "ನೀವು ಕ್ರಿಶ್ಚಿಯನ್ ಆಗಿ," "ನೀವು ಮಹಮ್ಮಡನ್ ಆಗಿ," ಎಂದು ಕೆಲವು ಧಾರ್ಮಿಕ ಪ್ರಕ್ರಿಯೆಯನ್ನು ಕಲಿಸುತ್ತಿಲ್ಲ. "ನೀವು ದೇವರನ್ನು ಪ್ರೀತಿಸಲು ಪ್ರಯತ್ನಿಸಿ" ಎಂದು ನಾವು ಸರಳವಾಗಿ ಕಲಿಸುತ್ತಿದ್ದೇವೆ.

690106 - ಉಪನ್ಯಾಸ ಭ. ಗೀತಾ ೦೪.೦೭-೧೦ - ಲಾಸ್ ಎಂಜಲೀಸ್