KN/690109c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಮೂರ್ಖ ವ್ಯಕ್ತಿಗಳು, 'ನಾನು ಬ್ರಹ್ಮ-ಜ್ಯೋತಿಯಲ್ಲಿ ವಿಲೀನಗೊಳ್ಳುತ್ತೇನೆ' " ಎಂದು ಯೋಚಿಸುತ್ತಿದ್ದಾರೆ, ಅವರು ಕಡಿಮೆ ಬುದ್ಧಿವಂತರು, ಏಕೆಂದರೆ ಅವರು ಅಲ್ಲಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಅವರಿಗೆ ಒಲವು, ಆಸೆಗಳು ಇವೆ. ನೀವು ಕೃಷ್ಣನ ಲೋಕಕ್ಕೆ ಹೋಗದ ಹೊರತು ನಿಮ್ಮ ಆಸೆಗಳನ್ನು ಈಡೇರಿಸಲು ಅಲ್ಲಿ ಯಾವುದೇ ಸೌಲಭ್ಯವಿಲ್ಲ. ಆದುದರಿಂದ ಆಸೆಗಳನ್ನು ಪೂರೈಸುವ ಸಲುವಾಗಿ ಅವನು ಮತ್ತೆ ಈ ಭೌತಿಕ ಜಗತ್ತಿಗೆ ಬರುತ್ತಾನೆ. ಏಕೆಂದರೆ ಅವನು ಚಟುವಟಿಕೆಗಳನ್ನು, ಆನಂದವನ್ನು ಬಯಸುತ್ತಾನೆ. ಆನಂದ-ಮಯೊ ಭ್ಯಾಸಾತ್ (ವೇದಾಂತ-ಸೂತ್ರ ೧.೧.೧೨ ). ಜೀವಾತ್ಮ ಮತ್ತು ಪರಮಾತ್ಮನು ಸ್ವಾಭಾವಿಕವಾಗಿ ಹರ್ಷಯುತರು. ಹರ್ಷದ ಪ್ರಶ್ನೆಯಿದ್ದಾಗಲೆಲ್ಲಾ ವೈವಿಧ್ಯತೆಗಳು ಇರಲೇಬೇಕು. ಆದ್ದರಿಂದ ಅಲ್ಲಿ ಯಾವುದೇ ವೈವಿಧ್ಯತೆ ಇಲ್ಲ. ಆದ್ದರಿಂದ ವೈವಿಧ್ಯವಿಲ್ಲದೆ ಅವನು ಬಹಳ ಕಾಲ ಅಲ್ಲಿಯೇ ಇರಲು ಸಾಧ್ಯವಿಲ್ಲ. ಅವನು ಬರಲೇಬೇಕು. ಆದರೆ ಅವನಿಗೆ ಆಧ್ಯಾತ್ಮಿಕ ವೈವಿಧ್ಯತೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಅವನು ಈ ಭೌತಿಕ ವೈವಿಧ್ಯತೆಗೆ ಹಿಂತಿರುಗಿ ಬರಲು ಬದ್ಧನಾಗಿದ್ದಾನೆ. ಅಷ್ಟೆ. "
690109 - ಉಪನ್ಯಾಸ ಭ. ಗೀತಾ ೪.೧೯-೨೫ - ಲಾಸ್ ಎಂಜಲೀಸ್