KN/690109d ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ದೇವರು ತುಂಬಾ ಕರುಣಾಮಯಿ, ಕೆಲವು ವ್ಯಕ್ತಿಗಳು ಆದರೂ ಅವನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ... ಮೊದಲನೆಯದಾಗಿ ಜನರು ನಿಜವಾಗಿ ದೇವರೇನು ಎಂದು ಅರ್ಥಮಾಡಿಕೊಳ್ಳಲಾಗಿಲ್ಲ, ಆದರೆ ದೇವರು ತನ್ನನ್ನು ವಿವರಿಸಲು ಸ್ವತಃ ಬರುತ್ತಾನೆ. ಆದರೂ, ಅವರು ತಪ್ಪು ಮಾಡುತ್ತಾರೆ. ಆದ್ದರಿಂದ ಕೃಷ್ಣ ನಮಗೆ ಕೃಷ್ಣ ಪ್ರಜ್ಞೆಯ ಬಗ್ಗೆ ಕಲಿಸಲು ಭಕ್ತನಾಗಿ ಬರುತ್ತಾನೆ. ಆದ್ದರಿಂದ ನಾವು ಶ್ರೀ ಚೈತನ್ಯ ಭಗವಂತರ ಹೆಜ್ಜೆಗುರುತುಗಳನ್ನು ಅನುಸರಿಸಬೇಕು. ಮತ್ತು "ಮೊದಲನೆಯದಾಗಿ ಗೌರಸುಂದರನ ಹೆಸರನ್ನು ಜಪಿಸಲು ಪ್ರಯತ್ನಿಸಿ" ಎಂದು ನರೋತ್ತಮ ದಾಸ ಠಾಕೂರಾ ಕಲಿಸುತ್ತಾರೆ.
ಈ ರೀತಿಯಾಗಿ, ನಾವು ಗೌರಸುಂದರ, ಭಗವಾನ್ ಚೈತನ್ಯರೊಂದಿಗೆ ಸ್ವಲ್ಪಮಟ್ಟಿಗೆ ಕಲೆತಾಗ, ನಾವು ಸ್ವಯಂಚಾಲಿತವಾಗಿ ಅತೀಂದ್ರಿಯ ಭಾವನೆಯನ್ನು ಅನುಭವಿಸುತ್ತೇವೆ. ಮತ್ತು ಆ ಭಾವನಾತ್ಮಕ ಹಂತವು ದೇಹದಲ್ಲಿ ನಡುಕದ ಮೂಲಕ ಪ್ರದರ್ಶಿತವಾಗುತ್ತದೆ. ಆದರೂ, "ನಾನು ಒಬ್ಬ ಮಹಾನ್ ಭಕ್ತನಾಗಿದ್ದೇನೆ" ಎಂದು ಸಾರ್ವಜನಿಕರಿಗೆ ತೋರಿಸಲು ನಾವು ಅಂತಹ ನಡುಗುವಿಕೆಯನ್ನು ಅನುಕರಿಸಬಾರದು, ಆದರೆ ನಾವು ಭಕ್ತಿ ಸೇವೆಯನ್ನು ಚೆನ್ನಾಗಿ ಮತ್ತು ನಿಷ್ಠೆಯಿಂದ ನಿರ್ವಹಿಸಬೇಕು; ಆಗ ಆ ಹಂತವು ಸ್ವಯಂಚಾಲಿತವಾಗಿ ಬರುತ್ತದೆ, ನಡುಕ. " |
690109 - ಭಜನ್ ಮತ್ತು 'ಗೌರಾಂಗ ಬೋಲಿತೆ ಹಬೆ' ದರ ಭಾವಾರ್ಥ - ಲಾಸ್ ಎಂಜಲೀಸ್ |