"ಶ್ರೀಮದ್ ಭಾಗವತದಲ್ಲಿ ಉಲ್ಲೇಖಿಸಿದೆ " ಮಗುವನ್ನು ಸನ್ನಿಹಿತವಾದ ಸಾವಿನಿಂದ ರಕ್ಷಿಸಲು ಸಾಧ್ಯವಾಗದ ಹೊರತು ಯಾರೂ ತಂದೆಯಾಗಲು ಬಯಸಬಾರದು, ಯಾರೂ ತಾಯಿಯಾಗಲು ಬಯಸಬಾರದು." ಆದ್ದರಿಂದ ಅದು ಆಧ್ಯಾತ್ಮಿಕ ಗುರುಗಳ ಕರ್ತವ್ಯವೂ ಸಹ ಆಗಿದೆ. ಒಬ್ಬನು ಶಿಷ್ಯನನ್ನು ಸನ್ನಿಹಿತ ಸಾವಿನಿಂದ ರಕ್ಷಿಸಲು ಸಾಧ್ಯವಾಗದ ಹೊರತು ಒಬ್ಬನು ಆಧ್ಯಾತ್ಮಿಕ ಗುರುವಾಗಬಾರದು. ಹಾಗಾದರೆ ಸನ್ನಿಹಿತವಾದ ಸಾವು ಏನದು ? ಸನ್ನಿಹಿತ ಸಾವು ಎಂದರೆ ... ನಾವು ಜೀವಾತ್ಮವಾದದ್ದರಿಂದ, ನಮಗೆ ಸಾವು ಇಲ್ಲ. ಆದರೆ ಸನ್ನಿಹಿತ ಸಾವು ಅಂದರೆ ಈ ದೇಹದ್ದು. ಆದ್ದರಿಂದ ಇದು ಆಧ್ಯಾತ್ಮಿಕ ಗುರುಗಳ ಕರ್ತವ್ಯ, ಇದು ಹೆತ್ತವರ ಕರ್ತವ್ಯ, ಇದು ರಾಜ್ಯದ ಕರ್ತವ್ಯ, ಈ ಸನ್ನಿಹಿತ ಜನನ ಮತ್ತು ಮರಣದಿಂದ ಜನರನ್ನು ರಕ್ಷಿಸುವುದು ಸಂಬಂಧಿಗಳ, ಸ್ನೇಹಿತರ, ಪ್ರತಿಯೊಬ್ಬರ ಕರ್ತವ್ಯವಾಗಿದೆ. "
|