KN/690215 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಪತ್ರಂ ಪುಷ್ಪಮ್ ಫಲಂ ತೋಯಂ
ಯೋ ಮೇ ಭಕ್ತ್ಯಾ ಪ್ರಯಚ್ಛತಿ
ತದ್ ಅಹಂ ಭಕ್ತಿ-ಉಪಹೃತಮ್
ಅಶ್ನಾಮಿ ಪ್ರಯತಾತ್ಮನಃ
(ಭ. ಗೀತಾ ೯.೨೬)

ಯಾರಾದರೂ ನನಗೆ ಹೂವು, ಹಣ್ಣುಗಳು, ತರಕಾರಿಗಳು, ಭಕ್ತಿ ಪ್ರೀತಿಯಿಂದ ಹಾಲು ನೀಡಿದರೆ, ನಾನು ಸ್ವೀಕರಿಸುತ್ತೇನೆ ಮತ್ತು ತಿನ್ನುತ್ತೇನೆ'. ಈಗ ಅವನು ಹೇಗೆ ತಿನ್ನುತ್ತಿದ್ದಾನೆ, ವರ್ತಮಾನದಲ್ಲಿ ಅದು ನಿಮಗೆ ಕಾಣಿಸುವುದಿಲ್ಲ-ಆದರೆ ಅವನು ತಿನ್ನುತ್ತಿದ್ದಾನೆ. ಅದನ್ನು ನಾವು ಪ್ರತಿದಿನ ಅನುಭವಿಸುತ್ತಿದ್ದೇವೆ. ಧಾರ್ಮಿಕ ಪ್ರಕ್ರಿಯೆಯ ಪ್ರಕಾರ ನಾವು ಕೃಷ್ಣನಿಗೆ ಅರ್ಪಿಸುತ್ತಿದ್ದೇವೆ ಮತ್ತು ಆಹಾರದ ರುಚಿ ತಕ್ಷಣವೇ ಬದಲಾಗುವುದನ್ನು ನೀವು ನೋಡುವಿರಿ. ಅದು ಪ್ರಾಯೋಗಿಕ. ಅವನು ತಿನ್ನುತ್ತಾನೆ, ಆದರೆ ಅವನು ಸಂತೃಪ್ತಿಯಾಗಿರುವುದರಿಂದ ಅವನು ನಮ್ಮಂತೆ ತಿನ್ನುವುದಿಲ್ಲ. ಹೇಗೆ ನಾನು ನಿಮಗೆ ಒಂದು ತಟ್ಟೆಯ ಆಹಾರ ಪದಾರ್ಥವನ್ನು ನೀಡಿದರೆ, ನೀವು ಮುಗಿಸುವಿರಿ. ಆದರೆ ದೇವರು ಹಸಿದಿಲ್ಲ, ಆದರೆ ಅವನು ತಿನ್ನುತ್ತಾನೆ. ಅವನು ಭೋಗದ ಪದಾರ್ಥಗಳನ್ನು ತಿಂದು ಮತ್ತು ಅದನ್ನು ಹೇಗಿತ್ತೋ ಹಾಗೆಯೇ ಇಡುತ್ತಾನೆ. "

690215 - ಉಪನ್ಯಾಸ ಭ. ಗೀತಾ ೦೬.೦೬.೧೨ - Los Angeles