"ಆದ್ದರಿಂದ ಐತಿಹಾಸಿಕ ಉಲ್ಲೇಖಗಳಿಂದಲೂ ಸಹ, ಕೃಷ್ಣನೊಂದಿಗೆ ಹೋಲಿಸಬಹುದಾದ ಒಬ್ಬ ವ್ಯಕ್ತಿಯೂ ಇಲ್ಲ. ಆದ್ದರಿಂದ ಅವನು ಎಲ್ಲರನ್ನೂ ಆಕರ್ಷಿಸುತ್ತಾನೆ. ಮತ್ತು ನಾವು ಅನುಭವಿಸುವ ಪ್ರತಿಯೊಂದೂ ಕೃಷ್ಣನ ಶಕ್ತಿಯ ಅಭಿವ್ಯಕ್ತಿಯಾಗಿದೆ. ಪರಾಸ್ಯ ಶಕ್ತಿರ್ ವಿವಿಧೈವ ಶ್ರುಯತೆ (ಶ್ವೇತಾಶ್ವತರ ಉಪನಿಷದ್ ೬.೮, ಚೈ.ಚ ಮಧ್ಯ ೧೩.೬೫, ಭಾವಾರ್ಥ). ಅವನ ಶಕ್ತಿಗಳು ವಿಭಿನ್ನವಾಗಿ ವ್ಯಕ್ತವಾಗುತ್ತವೆ. ಅಂತೆಯೇ, ವಿಷ್ಣು ಪುರಾಣದಲ್ಲಿಯೂ ಸಹ, ಪರಸ್ಯ ಬ್ರಹ್ಮಣಃ ಶಕ್ತಿಸ್ ತಥೈವಾ ಅಖಿಲಂ ಜಗತ್ (ವಿಷ್ಣು ಪುರಾಣ ೧.೨೨.೫೬) ಎಂದು ಹೇಳಲಾಗಿದೆ. ಅಖಿಲಂ ಜಗತ್ ಎಂದರೆ ಇಡೀ ವಿಶ್ವ ಸೃಷ್ಟಿಯು ದೇವೋತ್ತಮ ಪರಮ ಪುರುಷನ ವಿವಿಧ ಶಕ್ತಿಗಳ ಪ್ರದರ್ಶನ. "
|