KN/690331 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಏನನ್ನು ಮಾಯ ಎಂದು ಕರೆಯುತ್ತೇವೆ ...ಮಾಯಾ ಎಂದರೆ..... 'ಮಾ' ಎಂದರೆ 'ಅಲ್ಲ' ಮತ್ತು 'ಯ' ಎಂದರೆ 'ಇದು' ಎಂದು ಅರ್ಥ." ನೀವು ಏನನ್ನು ನಿಜವೆಂದು ಒಪ್ಪಿಕೊಳ್ಳುತ್ತಿರುವಿರೋ ಅದು ವಾಸ್ತವವಾಗಿ ಸತ್ಯವಲ್ಲ. ಇದನ್ನು ಮಾಯೆ ಎಂದು ಕರೆಯಲಾಗುತ್ತದೆ. ಮಾ-ಯಾ. ಮಾಯಾ ಎಂದರೆ "ಇದನ್ನು ಸತ್ಯವೆಂದು ಸ್ವೀಕರಿಸಬೇಡಿ." ಇದು ಕೇವಲ ಮಿನುಗುತ್ತಿರುವ ಬೆಳಕು ಮಾತ್ರ. ಕನಸಿನಲ್ಲಿ ನಾವು ಅನೇಕ ವಿಷಯಗಳನ್ನು ನೋಡುತ್ತೇವೆ, ಮತ್ತು ಮುಂಜಾನೆ ನಾವು ಎಲ್ಲವನ್ನೂ ಮರೆತುಬಿಡುತ್ತೇವೆ. ಇದು ಸೂಕ್ಷ್ಮ ಕನಸು. ಮತ್ತು ಈ ಅಸ್ತಿತ್ವ, ಈ ದೈಹಿಕ ಅಸ್ತಿತ್ವ ಮತ್ತುಈ ದೇಹಕ್ಕೆ ಸಂಬಂಧಿಸಿದ - ಸಮಾಜ, ಸ್ನೇಹ ಮತ್ತು ಪ್ರೀತಿ ಮತ್ತು ಅನೇಕ ವಿಷಯಗಳು-ಅವುಗಳು ಸಹ ಸ್ಥೂಲ ಕನಸು. ಅದು ಮುಗಿಯುತ್ತದೆ. ಅದು ಉಳಿಯುತ್ತದೆ ... ಹೇಗೆಂದರೆ ನೀವು ನಿದ್ದೆ ಮಾಡುವಾಗ ಕನಸು ಕೆಲವು ನಿಮಿಷಗಳು ಅಥವಾ ಕೆಲವು ಗಂಟೆಗಳ ಕಾಲ ಉಳಿಯುವಂತೆಯೇ, ಅದೇ ರೀತಿ, ಈ ಸ್ಥೂಲ ಕನಸು ಕೂಡ ಕೆಲವು ವರ್ಷಗಳವರೆಗೆ ಉಳಿಯುತ್ತದೆ. ಅಷ್ಟೆ. ಇದು ಕೂಡ ಕನಸೆ. ಆದರೆ ವಾಸ್ತವವಾಗಿ ನಾವು, ಕನಸು ಕಾಣುತ್ತಿರುವ ಅಥವಾ ವರ್ತಿಸುವ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸುತ್ತೇವೆ. ಆದ್ದರಿಂದ ನಾವು ಅವನನ್ನು ಈ ಕನಸಿನಿಂದ ಹೊರತೆಗೆಯಬೇಕು, ಸ್ಥೂಲ ಮತ್ತು ಸೂಕ್ಷ್ಮ. ಅದು ಪ್ರತಿಪಾದನೆಯಾಗಿದೆ. ಆದ್ದರಿಂದ ಇದನ್ನು ಕೃಷ್ಣ ಪ್ರಜ್ಞೆಯ ಈ ಪ್ರಕ್ರಿಯೆಯಿಂದ ಬಹಳ ಸುಲಭವಾಗಿ ಮಾಡಬಹುದು, ಮತ್ತು ಅದನ್ನು ಪ್ರಹ್ಲಾದ ಮಹಾರಾಜರು ವಿವರಿಸುತ್ತಿದ್ದಾರೆ."
690331 - ಉಪನ್ಯಾಸ ಶ್ರೀ.ಭಾ. ೦೭.೦೬.೦೯-೧೭ - ಸ್ಯಾನ್ ಫ್ರಾನ್ಸಿಸ್ಕೋ