KN/690409 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಈ ಹುಡುಗ, ನಾಸ್ತಿಕನ ಕುಟುಂಬದಲ್ಲಿ ಜನಿಸಿದರೂ-ಅವನ ತಂದೆ ಮಹಾನ್ ನಾಸ್ತಿಕ-ಆದರೆ ಅವನಿಗೆ ಒಬ್ಬ ಮಹಾನ್ ಭಕ್ತನಾದ ನಾರದನು ಹರಿಸಿದ್ದರಿಂದ, ಅವನು ಒಬ್ಬ ಮಹಾನ್ ಭಕ್ತನಾದನು. ಈಗ ಅವನು ಕೃಷ್ಣ ಪ್ರಜ್ಞೆಯನ್ನು ಹರಡುವ ಅವಕಾಶವನ್ನು ಸ್ವೀಕರಿಸಿದನು. ಎಲ್ಲಿ? ಅವನ ಶಾಲೆಯಲ್ಲಿ. ಅವನು ಐದು ವರ್ಷದ ಹುಡುಗನಾಗಿದ್ದನು, ಮತ್ತು ಅವಕಾಶ ಸಿಕ್ಕ ಕೂಡಲೇ ಅವನು ಕೃಷ್ಣ ಪ್ರಜ್ಞೆಯನ್ನು ತನ್ನ ಸಹಪಾಠಿಗಳಿಗೆ ಹರಡುತ್ತಿದ್ದನು. ಅದು ಅವನ ಚಟುವಾಟಿಕೆಯಾಗಿತ್ತು. ಮತ್ತು ಅನೇಕ ಬಾರಿ ಪ್ರಹ್ಲಾದ ಮಹಾರಾಜನ ತಂದೆ ಶಿಕ್ಷಕರನ್ನು ಕರೆದು ಕೇಳಿದನು, ' ಹಾಗಾದರೆ, ನೀವು ನನ್ನ ಮಗುವಿಗೆ ಯಾವ ಶಿಕ್ಷಣವನ್ನು ನೀಡುತ್ತಿದ್ದೀರಿ? ಅವನು ಹರೇ ಕೃಷ್ಣವನ್ನು ಏಕೆ ಜಪಿಸುತ್ತಿದ್ದಾನೆ? ' (ನಗು) 'ನನ್ನ ಹುಡುಗನನ್ನು ಏಕೆ ಹಾಳು ಮಾಡುತ್ತಿದ್ದೀರಿ?' (ನಗು) ನೋಡಿ ? ಆದ್ದರಿಂದ ನಾನು ಈ ಹುಡುಗರನ್ನು ಮತ್ತು ಹುಡುಗಿಯರನ್ನು ಹರೇ ಕೃಷ್ಣ ಜಪವನ್ನು ಕಲಿಸುವ ಮೂಲಕ ಹಾಳು ಮಾಡುತ್ತಿದ್ದೇನೆ ಎಂದು ಭಾವಿಸಬೇಡಿ. (ನಗು). "
690409 - ಉಪನ್ಯಾಸ ಶ್ರೀ.ಭಾ. ೦೭.೦೬.೦೧ - ನ್ಯೂ ಯಾರ್ಕ್