KN/690409b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭೌತಿಕ ಜೀವನ ಎಂದರೆ ನಮ್ಮ ಸ್ವಂತ ಇಂದ್ರಿಯಗಳನ್ನು ತೃಪ್ತಿಪಡಿಸುವುದು, ಮತ್ತು ವೈರಾಗ್ಯ-ವಿದ್ಯಾ ಅಥವಾ ಭಕ್ತಿ ಸೇವೆ ಎಂದರೆ ಕೃಷ್ಣನ ಇಂದ್ರಿಯಗಳನ್ನು ತೃಪ್ತಿಪಡಿಸುವುದು. ಅಷ್ಟೆ. ಭೌತಿಕ ಜಗತ್ತಿನಲ್ಲಿ ಪ್ರೀತಿ ಎಂದು ಕರೆಯಲ್ಪಡುವ ವಸ್ತು ಮತ್ತು ರಾಧಾ-ಕೃಷ್ಣರ ಪ್ರೀತಿಯ ನಡುವಿನ ವ್ಯತ್ಯಾಸವೇನು? ವ್ಯತ್ಯಾಸವೆಂದರೆ, ಭೌತಿಕ ಜಗತ್ತಿನಲ್ಲಿ, ಇಬ್ಬರೂ ತಮ್ಮದೇ ಆದ ಇಂದ್ರಿಯಗಳ ತೃಪ್ತಿಯನ್ನು ಪೂರೈಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಸರಿ ಎಂದುಕೊಳ್ಳೋಣ. ಒಬ್ಬ ಹುಡುಗನು ಹುಡುಗಿಯನ್ನು ಪ್ರೀತಿಸಿದಾಗ ಅಥವಾ ಹುಡುಗಿ ಹುಡುಗನನ್ನು ಪ್ರೀತಿಸಿದಾಗ, ಉದ್ದೇಶವು ಅವನ ಅಥವಾ ಅವಳ ಸ್ವಂತ ಪ್ರಜ್ಞೆಯನ್ನು ತೃಪ್ತಿ ಪಡಿಸಿಕೊಳ್ಳುವುದಾಗಿದೆ. ಆದರೆ ಗೋಪಿಯರು, ಅವರ ದೃಷ್ಟಿಕೋನ ..... ಗೋಪಿಯರು ಮಾತ್ರವಲ್ಲ; ಎಲ್ಲಾ ಗೋಪಾಲಕ ಹುಡುಗರು, ತಾಯಿ ಯಶೋದಾ, ನಂದ ಮಹಾರಾಜ, ವೃಂದಾವನದ ಎಲ್ಲ ಜನರು. ಆದ್ದರಿಂದ ಎಲ್ಲರೂ ಕೃಷ್ಣನನ್ನು ತೃಪ್ತಿ ಪಡಿಸಲು ಸಿದ್ಧರಾಗಿದ್ದಾರೆ. "
690409 - ಉಪನ್ಯಾಸ - ನ್ಯೂ ಯಾರ್ಕ್