"ನಾನು ಈ ಉಡುಪನ್ನು ಹಾಕಿಕೊಳ್ಳುವಂತೆಯೇ. ಅದು ಕೊಳಕಾಗಿದ್ದರೆ ಅಥವಾ ಅದು ತುಂಬಾ ಹಳೆಯದಾಗಿದ್ದರೆ, ನಾನು ಅದನ್ನು ಬದಲಾಯಿಸುತ್ತೇನೆ; ಆಗ ನಾನು ಇನ್ನೊಂದು ಉಡುಪನ್ನು ಸ್ವೀಕರಿಸುತ್ತೇನೆ. ಅದೇ ರೀತಿ, ಈ ದೇಹವೂ ಸಹ ಹಾಗೆ. ಯಾವಾಗ ಕೊಳಕು ಅಥವಾ ವಯಸ್ಸಾದರೇ, ಬಳಸುವದಿಲ್ಲ, ನಂತರ ನಾವು ಇನ್ನೊಂದು ದೇಹಕ್ಕೆ ಬದಲಾಯಿಸುತ್ತೇವೆ, ಮತ್ತು ಈ ದೇಹವನ್ನು ನಾವು ತ್ಯಜಿಸುತ್ತೇವೆ. ಇದು ಎಲ್ಲಾ ವೈದಿಕ ಸಾಹಿತ್ಯದ ಸಂಪೂರ್ಣ ಭೋಧನೆಯಾಗಿದೆ. ಆದ್ದರಿಂದ ಎಲ್ಲವೂ ಈ ದೇಹದ ಚಟುವಟಿಕೆಗಳಷ್ಟೇ ಅಲ್ಲ. ಮತ್ತು ವಿವಿಧ ರೀತಿಯ ದೇಹಗಳು ಇರುವಂತೆಯೇ, ನಾವು ಈ ದೇಹಕ್ಕೆ ಬಂದಿರುವಂತೆಯೇ, ದೇಹದ ಈ ಸ್ಥಿತಿಗೆ, ಅನೇಕ ರೀತಿಯ, ಅನೇಕ ಅಸಹ್ಯಕರ ದೇಹಗಳ ಮೂಲಕ ಹಾದುಹೋಗುತ್ತೇವೆ - ಜಲಚರಗಳು, ಮೃಗಗಳು, ಮರಗಳು, ಸಸ್ಯಗಳು, ಸೂಕ್ಷ್ಮಜೀವಿಗಳು, ಸರೀಸೃಪಗಳು, ಹೀಗೆ ಅನೇಕ ... ನಾವು ಪದೇ ಪದೇ ಹೇಳಿದ್ದೇವೆ, 8,400,000 ವರ್ಗಗಳು ... ಆದ್ದರಿಂದ ಇದು ಒಂದು ಅವಕಾಶ. ಈ ಜೀವನ, ಈ ಮಾನವ ರೂಪದ ಜೀವದಲ್ಲಿ, ಮತ್ತಷ್ಟು ಪ್ರಗತಿ ಸಾಧಿಸಲು ಒಂದು ಅವಕಾಶ. "
|