"ಪ್ರತಿಯೊಬ್ಬರೂ ಕೃಷ್ಣ ಪ್ರಜ್ಞೆಯನ್ನು ಹೊಂದುತ್ತಾರೆ ಎಂದು ನಾನು ನಿರೀಕ್ಷಿಸುವುದಿಲ್ಲ ಎಂದು ನಾನು ನಿಮಗೆ ಹೇಳಿದ್ದೇನೆ. ಅದು ಸಾಧ್ಯವಿಲ್ಲ. ಆದರೆ ಆಕಾಶದಲ್ಲಿ ಒಂದು ಚಂದ್ರನಿದ್ದರೆ ಅದು ಕತ್ತಲೆಯನ್ನು ನಿರ್ಮೂಲನೆ ಮಾಡಲು ಸಾಕು. ನಿಮಗೆ ಅನೇಕ ನಕ್ಷತ್ರಗಳ ಅಗತ್ಯವಿಲ್ಲ. ಏಕಸ್ ಚಂದ್ರಸ್ ತಮೋ ಹಂತಿ ನ ಚ ತಾರಾ ಸಹಸ್ರಶಃ (ಹಿತೋಪದೇಶ ೨೫). ಅಲ್ಲಿದ್ದರೇ ..., ಈ ಕೃಷ್ಣ ಪ್ರಜ್ಞೆ ಚಳುವಳಿ ಏನು ಎಂದು ಒಬ್ಬ ಮನುಷ್ಯನು ಸಂಪೂರ್ಣವಾಗಿ ಅರ್ಥಮಾಡಿಕೊಂಡರೆ, ಅವನು ಇತರ ಜನರಿಗೆ ಅಪಾರ ಪ್ರಯೋಜನವನ್ನು ನೀಡಬಲ್ಲನು.ಆದ್ದರಿಂದ ನೀವೆಲ್ಲರೂ ಬುದ್ಧಿವಂತ ಹುಡುಗರು ಮತ್ತು ಹುಡುಗಿಯರು. ನೀವುಗಳು ಈ ಕೃಷ್ಣ ಪ್ರಜ್ಞೆ ತತ್ವಶಾಸ್ತ್ರವನ್ನು ನಿಮ್ಮ ಎಲ್ಲಾ ತರ್ಕ ಅಥವಾ ವಾದದೊಂದಿಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಆದರೆ ಅದನ್ನು ಗಂಭೀರವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. "
|