"ಸುವರ್ಣ ಯುಗದಲ್ಲಿ, ಪ್ರತಿಯೊಬ್ಬರೂ ಧರ್ಮನಿಷ್ಠರಾಗಿದ್ದಾಗ, ಆ ಸಮಯದಲ್ಲಿ, ಧ್ಯಾನವನ್ನು ಅನುಮೋದಿಸಲಾಗಿತ್ತು. ಧ್ಯಾನ. ಕೃತೆ ಯದ್ ಧ್ಯಾಯತೋ ವಿಷ್ಣುಮ್: ವಿಷ್ಣುವಿನ ಮೇಲೆ ಧ್ಯಾನ ಮಾಡುವುದು. ತ್ರೇತಾಯಾಮ್ ಯಜತೋ ಮಖೈ. ಮುಂದಿನ ಯುಗದಲ್ಲಿ, ಮಹಾನ್ ಯಜ್ಞಗಳನ್ನು ಮಾಡಲು ಅನುಮೋದಿಸಿತ್ತು. ಮತ್ತು ಮುಂದಿನ ಯುಗದಲ್ಲಿ ದೇವಾಲಯದ ಪೂಜೆ, ಅಥವಾ ಚರ್ಚ್ ಆರಾಧನೆ, ಅಥವಾ ಮಸೀದಿ ಪೂಜೆಗೆ ಅನುಮೋದಿಸಲಾಯಿತು. ಕೃತೆ ಯದ್ ಧ್ಯಾಯತೋ ವಿಷ್ಣುಮ್ ತ್ರೇತಾಯಾಂ ಯಜತೋ ಮಖೈ , ದ್ವಾಪರೆ ಪರಿಚರ್ಯಾಯಾಂ. ದ್ವಾಪರ. ಮುಂದಿನ ಯುಗದಲ್ಲಿ, ಕೇವಲ ಐದು ಸಾವಿರ ವರ್ಷಗಳ ಮುಂಚೆ, ಆ ಯುಗವನ್ನು ದ್ವಾಪರ-ಯುಗವೆಂದು ಕರೆಯುತ್ತಾರೆ. ಆ ಸಮಯದಲ್ಲಿ ದೇವಾಲಯದ ಪೂಜೆಯು ಬಹಳ ವೈಭವಯುತವಾಗಿತ್ತು ಮತ್ತು ಅತ್ಯಂತ ಯಶಸ್ವಿಯಾಗಿತ್ತು. ಈಗ, ಈ ಯುಗದಲ್ಲಿ, ಸುಮಾರು ಐದು ಸಾವಿರ ವರ್ಷಗಳ ಹಿಂದೆ ಪ್ರಾರಂಭವಾದ ಕಲಿಯುಗ, ಈ ಯುಗದಲ್ಲಿ, ಇದನ್ನು ಅನುಮೋದಿಸಲಾಗಿದೆ, ಕಲೌ ತದ್ ಹರಿ-ಕೀರ್ತನಾತ್ : ಈ ಹರೇ ಕೃಷ್ಣ ಮಂತ್ರವನ್ನು ಸರಳವಾಗಿ ಜಪಿಸುವ ಮೂಲಕ ನೀವು ನಿಮ್ಮನ್ನು ಅರಿತುಕೊಳ್ಳಬಹುದು. ಮತ್ತು ನೀವು ಈ ಸರಳ ಪ್ರಕ್ರಿಯೆಯನ್ನು ಕೈಗೊಂಡರೆ, ಫಲಿತಾಂಶವು ಆ ಚೇತೋ-ದರ್ಪಣ-ಮಾರ್ಜನಮ್(ಚೈ ಚ ಅಂತ್ಯ ೨೦.೧೨ , ಶಿಕ್ಷಾಷ್ಠಕ1). ಕಸದ ವಿಷಯಗಳಿಂದ ತುಂಬಿರುವ ನಿಮ್ಮ ಹೃದಯವು ಶುದ್ಧವಾಗುತ್ತದೆ
|