"ಒಬ್ಬನು ಅನೇಕ ಪಾಪಕಾರ್ಯಗಳನ್ನು ಮಾಡಿದ್ದರೂ ಸಹ, ಅವನು ಒಮ್ಮೆ ನಾರಾಯಣನ ಪವಿತ್ರ ನಾಮವನ್ನು ಉಚ್ಚರಿಸಿದರೆ ತಕ್ಷಣ ವಿಮುಕ್ತನಾಗುತ್ತಾನೆ", ಎಂದು ವಿಷ್ಣುಧೂತ ಹೇಳುತ್ತಾರೆ. ಅದು ನಿಜ, ಅದು ಉತ್ಪ್ರೇಕ್ಷೆಯಲ್ಲ. ಒಬ್ಬ ಪಾಪಿ, ಹೇಗಾದರೂ ಸರಿ ಈ ಹರೇ ಕೃಷ್ಣ ಮಂತ್ರವನ್ನು ಜಪಿಸಿದರೆ ತಕ್ಷಣವೇ ಎಲ್ಲಾ ಪ್ರತಿಕ್ರಿಯೆಗಳಿಂದ ಮುಕ್ತನಾಗುತ್ತಾನೆ. ಆದರೆ ಕಷ್ಟವೆಂದರೆ ಅವನು ಮತ್ತೆ ಪಾಪಮಾಡುತ್ತಾನೆ. ಅದು ನಾಮಾಪರಾಧ. ಹತ್ತು ರೀತಿಯ ಅಪರಾಧಗಳಿವೆ. ಹರೇ ಕೃಷ್ಣ ಮಂತ್ರವನ್ನು ಜಪಿಸುವುದರ ಮೂಲಕ ಎಲ್ಲಾ ಪಾಪ ಪ್ರತಿಕ್ರಿಯೆಗಳಿಂದ ಮುಕ್ತನಾದ ನಂತರ, ಅವನು ಮತ್ತೆ ಅದೇ ಪಾಪವನ್ನು ಮಾಡಿದರೆ ಅದು ಘೋರ ಅಪರಾಧವಾಗುತ್ತದೆ. ಇದು ಅತ್ಯಂತ ದುಷ್ಟ ಅಪರಾಧ. ಸಾಮಾನ್ಯ ಮನುಷ್ಯನಿಗೆ ಅದು ಅಷ್ಟೊಂದು ತೀವ್ರವಾಗಿರುವುದಿಲ್ಲ. ಆದರೆ ಹರೇ ಕೃಷ್ಣ ಮಂತ್ರವನ್ನು ಜಪಿಸುತ್ತಿರುವವನು ಈ ಮಂತ್ರದ ಲಾಭವನ್ನು ಪಡೆದುಕೊಳ್ಳುತ್ತಾ, 'ನಾನು ಹರೇ ಕೃಷ್ಣ ಮಂತ್ರವನ್ನು ಜಪಿಸುತ್ತಿದ್ದೇನೆ, ಸ್ವಲ್ಪ ಪಾಪ ಮಾಡಿದರೂ ಮುಕ್ತನಾಗುತ್ತೇನೆ' ಎಂದುಕೊಂಡರೆ, ಅವನು ಮುಕ್ತನಾಗುತ್ತಾನೆ, ಆದರೆ ಅವನು ಅಪರಾಧಿಯಾಗಿದ್ದರಿಂದ ಹರೇ ಕೃಷ್ಣ ಮಂತ್ರ ಜಪಿಸುವ ಅಂತಿಮ ಗುರಿಯನ್ನು ಸಾಧಿಸುವುದಿಲ್ಲ.”
|