KN/710105 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬಾಂಬೆ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
“ಸರ್ವಸ್ವವೂ ಯಾವುದರಿಂದ ಅಥವ ಯಾರಿಂದ ಹೊರಹೊಮ್ಮುತ್ತದೋ ಅವನೇ ಪರಾತ್ಪರ ಸತ್ಯ. ಭಗವಂತನಲ್ಲದೆ ಬೇರೆ ಎಲ್ಲಿಂದ ಈ ತುಂಟತನ ಬರುವುದು? ಭಗವಂತನಲ್ಲದೆ ಬೇರೆ ಎಲ್ಲಿಂದ ಈ ಕಳ್ಳತನ ಮಾಡುವ ಪ್ರವೃತ್ತಿ ಬರುವುದು? ಆದರೆ ಅವನ್ನು ಪರಾತ್ಪರನಾದ ಕಾರಣ ಅವನ ಕಳ್ಳತನವೂ ಕೂಡ ಅವನ ಆಶೀರ್ವಾದದಂತೆ. ಮಾಖನ್-ಚೋರ. ಕೃಷ್ಣನು ಬೆಣ್ಣೆ ಕದಿಯುತ್ತಿದ್ದ, ಆದರೆ ಅದನ್ನು ಪೂಜಿಸುತ್ತೇವೆ ‘ಮಾಖನ’ ಎಂಬ ಹೆಸರಲ್ಲಿ. ಹಾಗೆಯೇ ಕ್ಷೀರ-ಚೋರ-ಗೋಪಿನಾಥ ಎಂದು ಇನ್ನೊಂದು ದೇವಸ್ತಾನದಲ್ಲಿ. ಗೋಪಿನಾಥನನ್ನು ಹಾಲು ಕದಿಯುವ ಕಳ್ಳ, ಕ್ಷೀರಚೋರ, ಎಂದು ಕರೆಯುತ್ತಾರೆ. ಚೋರ, ಕಳ್ಳ ಎಂಬುವ ಹೆಸರಲ್ಲೆ ಅವನು ಪ್ರಸಿದ್ದ.” |
710105 - ಸಂಭಾಷಣೆ - ಬಾಂಬೆ |