"ಪೂರ್ವ ದಿಕ್ಕಿನಿಂದ ಸೂರ್ಯ ಉದಯಿಸುವುದನ್ನು ಮಗು ಪ್ರತಿದಿನ ನೋಡುವಂತೆ - ಆದ್ದರಿಂದ ಪೂರ್ವ ದಿಕ್ಕು ಸೂರ್ಯನ ತಂದೆ. ಪೂರ್ವ ದಿಕ್ಕು ಸೂರ್ಯನ ತಂದೆಯೇ? ಸೂರ್ಯ ಯಾವಾಗಲೂ ಇರುತ್ತಾನೆ, ಆದರೆ ಬೆಳಿಗ್ಗೆ ಪೂರ್ವದಿಂದ ಗೋಚರಿಸುವುದನ್ನು ನೀವು ನೋಡುತ್ತೀರಿ. ಅಷ್ಟೆ. ಅದು ನಿಮ್ಮ ದೃಷ್ಟಿಕೋನ. ಸೂರ್ಯ ಪೂರ್ವ ದಿಕ್ಕಿನಿಂದ ಹುಟ್ಟುತ್ತಾನೆ ಎಂದರ್ಥವಲ್ಲ. ಸೂರ್ಯ ಯಾವಾಗಲೂ ಆಕಾಶದಲ್ಲೆ ಇರುತ್ತಾನೆ. ಅದೇ ರೀತಿ, ಕೃಷ್ಣ ಅಜರಾಮರ, ಆದರೆ ಮೂರ್ಖ ವ್ಯಕ್ತಿಗೆ ಅವನು ಹುಟ್ಟಿದಂತೆ ತೋರುತ್ತದೆ. ಅಜೋ 'ಪಿ ಸನ್ ಅವ್ಯಯಾತ್ಮ. ಅಜೋ ಪಿ: ‘ನನಗೆ ಜನ್ಮವಿಲ್ಲ.’ ಅಜಃ. ಈದೇ ಪದವನ್ನು ಬಳಸಲಾಗಿದೆ. ಅಜೋ 'ಪಿ ಸನ್ ಅವ್ಯಯಾತ್ಮ ಭೂತಾನಮ್ ಈಶ್ವರೋ ‘ಪಿ ಸನ್. ಹಾಗಾದರೆ ನೀವು ಕೃಷ್ಣನ ಜನನವನ್ನು ಸಾಮಾನ್ಯ ಜನನಕ್ಕೆ ಹೇಗೆ ಹೋಲಿಸಬಹುದು? ಯಾರಾದರು ಕೃಷ್ಣನ ಜನ್ಮವೇನು ಎಂದು ತಿಳಿದುಕೊಂಡರೆ ಮೋಕ್ಷ ಪಡೆಯುತ್ತಾನೆ. ಜನ್ಮ ಕರ್ಮ ಮೇ ದಿವ್ಯಮ್ ಯೋ ಜಾನಾತಿ ತತ್ವತಃ."
|