KN/710129 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಲಹಾಬಾದ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ನಿಜವಾಗಿಯೂ ಶಾಂತಿಯನ್ನು ಬಯಸಿದರೆ, ಭಗವದ್ಗೀತೆಯಲ್ಲಿ ವಿವರಿಸಿರುವ ಶಾಂತಿಯ ಸೂತ್ರವನ್ನು ನೀವು ಒಪ್ಪಿಕೊಳ್ಳಬೇಕು; ಕೃಷ್ಣ, ಅಥವಾ ಭಗವಂತನು, ಭೋಕ್ತಾರನು, ಏಕೈಕ ಭೋಕ್ತಾರನು. ಅವನು ಅಖಂಡ ಪೂರ್ಣ. ಈ ದೇಹವು ಅಖಂಡ ಪೂರ್ಣವಾಗಿರುವಂತೆ; ಕೈಕಾಲುಗಳು ದೇಹದ ಭಾಗಾಂಶವಾಗಿದೆ, ಆದರೆ ಈ ದೇಹದ ನಿಜವಾದ ಭೋಕ್ತಾರನು ಹೊಟ್ಟೆ. ಕಾಲು ಚಲಿಸುತ್ತಿದೆ, ಕೈ ಕೆಲಸ ಮಾಡುತ್ತಿದೆ, ಕಣ್ಣುಗಳು ನೋಡುತ್ತಿವೆ, ಕಿವಿಗಳು ಕೇಳುತ್ತಿವೆ. ಅವೆಲ್ಲವೂ ಇಡೀ ದೇಹದ ಸೇವೆಯಲ್ಲಿ ನಿರತವಾಗಿವೆ. ಆದರೆ ತಿನ್ನುವ ಅಥವಾ ಸವಿಯುವ ವಿಷಯವನ್ನು ಬೆರಳುಗಳು, ಕಿವಿಗಳು, ಅಥವಾ ಕಣ್ಣುಗಳು ಮಾಡಲಾರವು; ಹೊಟ್ಟೆ ಮಾತ್ರ ಭೋಗಿಸುವುದು. ಮತ್ತು ನೀವು ಹೊಟ್ಟೆಗೆ ಆಹಾರ ಪದಾರ್ಥಗಳನ್ನು ನೀಡಿದರೆ ಕಣ್ಣುಗಳು, ಕಿವಿಗಳು, ಬೆರಳುಗಳು - ದೇಹದ ಯಾವುದೇ ಭಾಗವಾಗಲಿ - ತೃಪ್ತಿಪಡುತ್ತದೆ.”
710129 - ಉಪನ್ಯಾಸ at the House of Mr. Mitra - ಅಲಹಾಬಾದ್