"ಪ್ರತ್ಯಕ್ಷಾವಗಮಂ ಧರ್ಮ್ಯಂ (ಭ.ಗೀ 9.2) ಎಂದು ಹೇಳಳಾಗಿದೆ. ಆತ್ಮಸಾಕ್ಷಾತ್ಕಾರದ ಇತರ ವಿಧಾನಗಳಲ್ಲಿ - ಅಂದರೆ ಕರ್ಮ, ಜ್ಞಾನ, ಯೋಗ - ಇವುಗಳಲ್ಲಿ ನೀವು ನಿಜವಾಗಿಯೂ ಪ್ರಗತಿಯನ್ನು ಸಾಧಿಸುತ್ತಿರುವಿರಾ ಎಂದು ಪರೀಕ್ಷಿಸಲು ಸಾಧ್ಯವಾಗುವುದಿಲ್ಲ. ಆದರೆ ಭಕ್ತಿ-ಯೋಗವು ತುಂಬಾ ಪರಿಪೂರ್ಣವಾಗಿದ್ದು, ನೀವು ಪ್ರಗತಿಯನ್ನು ಸಾಧಿಸುತ್ತಿದ್ದೀರೋ ಇಲ್ಲವೋ ಎಂಬುದನ್ನು ಪ್ರಾಯೋಗಿಕವಾಗಿ ನೀವೇ ಪರೀಕ್ಷಿಸಿಕೊಳ್ಳಬಹುದು. ನಾನು ಹಲವಾರು ಬಾರಿ ನೀಡಿರುವ ಉದಾಹರಣೆ – ನಿಮಗೆ ಹಸಿವಾದಾಗ ಆಹಾರ ಪದಾರ್ಥಗಳನ್ನು ತಿಂದು ನಿಮ್ಮ ಹಸಿವು ಎಷ್ಟು ಕಡಿಮೆಯಾಗಿದೆ, ಎಷ್ಟು ಶಕ್ತಿ ಮತ್ತು ಪೋಷಣೆಯನ್ನು ಪಡೆದಿರುವಿರಿ ಎಂಬುದನ್ನು ನೀವೇ ಅರ್ಥಮಾಡಿಕೊಳ್ಳಬಹುದು. ನೀವು ಬೇರೆಯವರನ್ನು ಕೇಳಬೇಕಾಗಿಲ್ಲ. ಅದೇ ರೀತಿ, ನೀವು ಹರೇ ಕೃಷ್ಣ ಮಂತ್ರವನ್ನು ಪಠಿಸುತ್ತಿದ್ದು, ಎಷ್ಟು ಪ್ರಗತಿ ಹೊಂದಿದ್ದೀರಿ ಎಂದು ಪರೀಕ್ಷಿಸಬೇಕಾದರೆ ನೀವು ನಿಜವಾಗಿ ಭೌತಿಕ ಪ್ರಕೃತಿಯ ಎರಡು ಕೆಳಮಟ್ಟದ ಗುಣಗಳಾದ ರಜೋಗುಣ ಮತ್ತು ತಮೋಗುಣಗಳಿಗೆ ಎಷ್ಟು ಆಕರ್ಷಿತರಾಗುತ್ತೀದ್ದಿರಿ ಎಂದು ನೋಡಬೇಕು.”
|