"ಎಲ್ಲಾ ಯೋಗಿಗಳಲ್ಲಿ, ಯಾವ ವ್ಯಕ್ತಿಯು ಕೃಷ್ಣನ ಧ್ಯಾನದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾನೋ, ಧ್ಯಾನವಸ್ತಿತಾ-ಯೋಗಿನೋ..., ಪಶ್ಯಂತಿ ಯಮ್ ಯೋಗಿನೋ (ಶ್ರೀ.ಭಾ 12.13.1). ಧ್ಯಾನಾ ಎಂದರೆ ವಿಷ್ಣು ಅಥವಾ ಕೃಷ್ಣನ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು. ಅದೇ ನಿಜವಾದ ಜೀವನ. ಆದ್ದರಿಂದ ಧ್ಯಾನದಲ್ಲಿ ತೊಡಗಿರುವ ಯೋಗಿಗಳು, ಅವರು ಕೃಷ್ಣ, ಅಥವಾ ವಿಷ್ಣುವನ್ನು ಅನ್ವೇಷಿಸಲು ಪ್ರಯತ್ನಿಸುತ್ತಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಕೃಷ್ಣ, ಮತ್ತು ವಿಷ್ಣು ಒಬ್ಬನೇ. ಆದ್ದರಿಂದ ಈ ಕೃಷ್ಣ ಪ್ರಜ್ಞೆ ಚಳುವಳಿ ಕೃಷ್ಣನ ಬಗ್ಗೆ ನಮ್ಮ ಸುಪ್ತ ಪ್ರಜ್ಞೆಯನ್ನು ಪುನರುಜ್ಜೀವನಗೊಳಿಸುವ ಒಂದು ಪ್ರಾಯೋಗಿಕ ಚಳುವಳಿಯಾಗಿದೆ. ತಂದೆ ಮತ್ತು ಮಗನನ್ನು ಬೇರ್ಪಡಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಕೃಷ್ಣನಿಗು ನಮಗು ಯಾವುದೇ ಬೇರ್ಪಡೆಯಿಲ್ಲ. ಆದರೆ ಕೆಲವೊಮ್ಮೆ ಮಗನು ತನ್ನ ತಂದೆಯನ್ನು ಮರೆತುಬಿಡುತ್ತಾನೆ. ಇದೇ ನಮ್ಮ ಪ್ರಸ್ತುತ ಪರಿಸ್ಥಿತಿ.”
|