"ಆದ್ದರಿಂದ ಈ ವಿಜ್ಞಾನ, ಈ ಪ್ರಚಾರ, ಈ ಕೃಷ್ಣ ಪ್ರಜ್ಞೆಯನ್ನು ನಾವು ಪ್ರಪಂಚದಾದ್ಯಂತ ಹರಡುತ್ತಿದ್ದೇವೆ. ಅದು ಸ್ವೀಕರಿಸಲಾಗುತ್ತಿದೆ. ಇದನ್ನು ಕೇವಲ ಒಬ್ಬ ವ್ಯಕ್ತಿಯಿಂದ ಮಾಡಲಾಗುತ್ತಿದೆ... ಆದ್ದರಿಂದ..., ಆದರೆ ನೀವೆಲ್ಲರೂ ಸೇರಿದರೆ, ನೀವು ಪ್ರಪಂಚದಾದ್ಯಂತ ಈ ಕೃಷ್ಣ ಪ್ರಜ್ಞೆ ಆಂದೋಲನವನ್ನು ಬೋಧಿಸುವ ವೈಜ್ಞಾನಿಕ ಕಾರ್ಯಕ್ರಮವನ್ನು ಮಾಡಿದರೆ, ಒಂದು ದಿನ ಜನರು ಭಾರತಕ್ಕೆ ಋಣಿ ಆಗುತ್ತಾರೆ. "ನಮಗೆ ಭಾರತದಿಂದ ಏನೋ ಸಿಕ್ಕಿದೆ”, ಎಂದು ಅವರು ಭಾವಿಸುತ್ತಾರೆ. ಈಗ ಭಾರತ ವಿದೇಶಗಳನ್ನು ಬೇಡುವಂತಾಗಿದೆ, "ನನಗೆ ಹಣ ಕೊಡಿ, ನನಗೆ ಅಕ್ಕಿ ಕೊಡಿ, ಗೋಧಿ ಕೊಡಿ, ಸೈನಿಕರನ್ನು ಕೊಡಿ", ಎಂದು. ಆದರೆ ಈ ಆಂದೋಲನವನ್ನು ನಾವು ಅವರ ಬಳಿಗೆ ಕೊಂಡೊಯ್ಯಿದರೆ, ಅವರಿಂದ ಭಿಕ್ಷೆ ಬೇಡುವ ಪ್ರಶ್ನೆಯೇ ಇಲ್ಲ – ನಾವು ಅವರಿಗೆ ಕೊಡುತ್ತೇವೆ. ಏನನ್ನಾದರೂ ಕೊಡಲು ಪ್ರಯತ್ನಿಸಿ. ಅದೇ ನನ್ನ ವಿನಂತಿ.”
|