"ಪ್ರಸ್ತುತ, ನಾವು ಮೇಜುಗಳು ಮತ್ತು ಕುರ್ಚಿಗಳ ಮೇಲೆ ಕುಳಿತು ಊಟ ಮಾಡುತ್ತಿರುವುದನ್ನು ಪ್ರಗತಿ ಎಂದು ತಿಳಿದುಕೊಂಡಿದ್ದೇವೆ. ಅದು ನಮ್ಮ ತಪ್ಪು. ಅದು ಪ್ರಗತಿಯಲ್ಲ. ತಿನ್ನುವುದು... ತಿನ್ನುವ ಪ್ರಯೋಜನ, ನೀವು ತಿನ್ನುವುದಕ್ಕು ಮತ್ತು ಪ್ರಾಣಿ ತಿನ್ನುವುದಕ್ಕು ವ್ಯತ್ಯಾಸವಿಲ್ಲ. ತಿನ್ನುವುದು ಎಂದರೆ ದೇಹ ಮತ್ತು ಆತ್ಮವನ್ನು ಒಟ್ಟಾಗಿ ಕಾಪಾಡಿಕೊಳ್ಳುವುದು. ಆದ್ದರಿಂದ ತಿನ್ನುವ ವಿಧಾನಗಳಲ್ಲಿ ಪ್ರಗತಿ, ಅದು ನಾಗರಿಕತೆಯ ಪ್ರಗತಿಯೆಂದು ಅರ್ಥವಲ್ಲ. ನಿದ್ರೆಯ ವಿಧಾನಗಳಲ್ಲಿ ಪ್ರಗತಿ, ನಾಗರಿಕತೆಯ ಪ್ರಗತಿ ಎಂದರ್ಥವಲ್ಲ. ಅದೇ ರೀತಿ, ಮಥುನದ ವಿಧಾನಗಳಲ್ಲಿ ಪ್ರಗತಿ, ನಾಗರಿಕತೆಯ ಪ್ರಗತಿ ಎಂದರ್ಥವಲ್ಲ. ಅಂತೆಯೇ, ರಕ್ಷಣೆಗಾಗಿ ನನ್ನ ಶತ್ರುವನ್ನು ಕೊಲ್ಲಲು ಪರಮಾಣು ಬಾಂಬುಗಳನ್ನು ಅನ್ವೇಷಿಸುವಲ್ಲಿನ ಪ್ರಗತಿ, ಅದು ನಾಗರಿಕತೆಯ ಪ್ರಗತಿಯಲ್ಲ. ಆತ್ಮವನ್ನು, ಮತ್ತು ಆತ್ಮದ ಅಂತಿಮ ಗುರಿ - ಆತ್ಮವು ಒಂದು ದೇಹದಿಂದ ಇನ್ನೊಂದಕ್ಕೆ ಹೇಗೆ ಸ್ಥಳಾಂತರವಾಗುತ್ತದೆ - ಎಂದು ತಿಳಿದುಕೊಳ್ಳುವುದರಲ್ಲಿ ಎಷ್ಟು ಮುಂದುವರೆದಿದ್ದೀರಿ ಎಂಬುದೇ ನಾಗರಿಕತೆಯ ಪ್ರಗತಿ ಎಂದರೆ.”
|