"ವಾಸ್ತವವಾಗಿ ಧರ್ಮ ಎಂದರೆ ದೇವರು, ಮತ್ತು ದೇವರೊಂದಿಗಿನ ನಮ್ಮ ಸಂಬಂಧ, ಮತ್ತು ನಾವು ಜೀವನದ ಅಂತಿಮ ಗುರಿಯನ್ನು ಸಾಧಿಸಲು ಆ ಸಂಬಂಧಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು. ಅದೇ ಧರ್ಮ-ಸಂಭಂಧ, ಅಭಿಧೇಯ, ಪ್ರಯೋಜನ, ಈ ಮೂರು ವಿಷಯಗಳಿವೆ. ಇಡೀ ವೇದಗಳನ್ನು ಮೂರಾಗಿ ವಿಭಾಗಿಸಲಾಗಿದೆ. ಸಂಬಂಧ, ದೇವರೊಂದಿಗಿನ ನಮ್ಮ ಸಂಪರ್ಕವೇನು? ಅದನ್ನು ಸಂಭಂಧ ಎಂದು ಕರೆಯಲಾಗುತ್ತದೆ. ತದನಂತರ ಅಭಿಧೇಯ. ಆ ಸಂಬಂಧದ ಪ್ರಕಾರ ನಾವು ಕಾರ್ಯನಿರ್ವಹಿಸಬೇಕು. ಅದನ್ನು ಅಭಿಧೇಯ ಎಂದು ಕರೆಯಲಾಗುತ್ತದೆ. ಮತ್ತು ನಾವು ಯಾಕೆ ವರ್ತಿಸಬೇಕು? ಏಕೆಂದರೆ ನಮಗೆ ಜೀವನದ ಗುರಿಯಿದೆ, ಜೀವನದ ಗುರಿಯನ್ನು ಸಾಧಿಸಲು. ಹಾಗಾದರೆ ಜೀವನದ ಗುರಿ ಏನು? ಜೀವನದ ಗುರಿ ಎಂದರೆ ನಮ್ಮ ಮನೆಗೆ, ಮರಳಿ ಭಗವದ್ಧಾಮಕ್ಕೆ ಹಿಂತಿರುಗುವುದು. ಅದು ಜೀವನದ ಗುರಿ.”
|