KN/750926 ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಹ್ಮದಾಬಾದ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಪರಾತ್ಪರ ಸತ್ಯ ಮೂರು ವಿಧಗಳಲ್ಲಿ ವ್ಯಕ್ತವಾಗಿದೆ: ನಿರಾಕಾರ ಬ್ರಹ್ಮನ್, ಸರ್ವಾಂತರ್ಯಾಮಿ ಪರಮಾತ್ಮ, ಮತ್ತು ದೇವೋತ್ತಮ ಪರಮಪರುಷ - ಬ್ರಹ್ಮೇತಿ ಪರಮಾತ್ಮೇತಿ ಭಗವಾನ್ ಇತಿ ಶಬ್ದ್ಯತೇ (ಶ್ರೀ.ಭಾ 1.2.11) - ಆದರೆ ಅವು ಒಂದೇ. ಇದೇ ಶಾಸ್ತ್ರದ ತೀರ್ಪು. ಆದ್ದರಿಂದ ಈ ಉದಾಹರಣೆಯಿಂದ ಸೂರ್ಯ ಸ್ಥಾನಿಕವಾಗಿದೆ ಎಂದು ನಾವು ಅರ್ಥಮಾಡಿಕೊಳ್ಳಬಹುದು. ಎಲ್ಲರೂ ನೋಡಬಹುದು. ಅದೇ ಸಮಯದಲ್ಲಿ, ಸೂರ್ಯನ ಬೆಳಕು ಎಲ್ಲೆಡೆ ವ್ಯಾಪಿಸಿದೆ, ಮತ್ತು ಸೂರ್ಯ ಮಂಡಳದೊಳಗೆ ಒಬ್ಬ ಪ್ರಧಾನ ದೇವತೆ ಇದ್ದಾನೆ. ಅವನು ಒಬ್ಬ ವ್ಯಕ್ತಿ. ಅದೇ ರೀತಿ, ಮೂಲತಃ ದೇವರು ವ್ಯಕ್ತಿ, ತದನಂತರ, ಅವನು ವಿಸ್ತರಿಸಿದಾಗ ಸರ್ವವ್ಯಾಪಿ ಪರಮಾತ್ಮ. ಮತ್ತು ಅವನು ತನ್ನ ಶಕ್ತಿಯಿಂದ ವಿಸ್ತರಿಸಿದಾಗ ಅದು ಬ್ರಹ್ಮನ್. ಇದು ಅದರ ಅರ್ಥ. ಬ್ರಹ್ಮೇತಿ ಪರಮಾತ್ಮೇತಿ ಭಗವಾನ್ ಇತಿ. ಕೆಲವರು ನಿರಾಕಾರ ಬ್ರಹ್ಮನ್ ಅನ್ನು, ಮತ್ತು ಯೋಗಿಗಳು ಅಂತರ್ಯಾಮಿ ಪರಮಾತ್ಮನನ್ನು ಅರಿತುಕೊಳ್ಳುವ ಮೂಲಕ ಸಂತುಷ್ಟರಾಗುತ್ತಾರೆ. ಆದರೆ ಭಕ್ತರು, ಪರಮಸತ್ಯ ಹಾಗು ಸರ್ವಮೂಲನಾದ ಕೃಷ್ಣನನ್ನು ಅರಿತುಕೊಳ್ಳುತ್ತಾರೆ.”
750926 - ಮುಂಜಾನೆಯ ವಾಯು ವಿಹಾರ - ಅಹ್ಮದಾಬಾದ್