ಆದ್ದರಿಂದ, ಈ ಮಾನವ ಜನ್ಮ ನೀವು ಎಲ್ಲಿಗೆ ಹೋಗಬೇಕೆಂಬುದನ್ನು ನಿರ್ಧರಿಸಲು ಒಂದು ಸದವಾಕಾಶ. ನೀವು ನರಕಕ್ಕೆ ಅಥವಾ ಸ್ವರ್ಗಕ್ಕೆ ಹೋಗುತ್ತೀರೋ, ಅಥವಾ ಮನೆಗೆ, ಅಂದರೆ ಭಗವದ್ಧಾಮಕ್ಕೆ ಹಿಂತಿರುಗುತ್ತೀರೋ? ನೀವು ನಿರ್ಧರಿಸಬೇಕು. ಇದು ಮಾನವ ಬುದ್ಧಿವಂತಿಕೆ. ಬೆಕ್ಕುಗಳು ಮತ್ತು ನಾಯಿಗಳಂತೆ ಕೆಲಸ ಮಾಡುವುದು ಮತ್ತು ಬೆಕ್ಕುಗಳು ಮತ್ತು ನಾಯಿಗಳಂತೆ ಸಾಯುವುದು ಅಲ್ಲ. ಅದು ಮಾನವ ಜೀವನವಲ್ಲ. ನೀವು ಮುಂದೆ ಎಲ್ಲಿಗೆ ಹೋಗಬೇಕೆಂಬುದನ್ನು ನಿರ್ಧರಿಸವುದೇ ಈ ಮಾನವ ಜನ್ಮದ ಉದ್ದೇಶವಾಗಿದೆ. ವಿಕಸನ ಪ್ರಕ್ರಿಯೆಯ ಮೂಲಕ ನೀವು ಈ ಮಾನವ ಜನ್ಮಕ್ಕೆ ಬಂದಿದ್ದೀರಿ - ಜಲಜಾ ನವ ಲಕ್ಷಾಣಿ ಸ್ಥಾವರಾ ಲಕ್ಷ ವಿಂಶತಿ (ಪದ್ಮ ಪುರಾಣ). 8,400,000 ಜೀವರಾಶಿ ಜನ್ಮಗಳನ್ನು ದಾಟಿದ ಮೇಲೆ, ನಿಮಗೆ ಈ ಮಾನವ ಜನ್ಮ ಸಿಕ್ಕಿದೆ. ಈಗ ನೀವು ಎಲ್ಲಿಗೆ ಹೋಗಬೇಕೆಂದು ನೀವೆ ನಿರ್ಧರಿಸಿ.
|